ಐಶ್ವರ್ಯಾ ರೈ, ಕತ್ರಿನಾ ಕೈಫ್ ಪ್ರೀತಿಯ ವಿಚಾರದಲ್ಲಿ ಮೌನ ಮುರಿದ ಸಲ್ಮಾನ್ ಖಾನ್

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದೆ. ಇದೇ ವೇಳೆ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಸಲ್ಲು ಬಾಯ್ ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದಿದ್ದಾರೆ.

ರಜತ್ ಶರ್ಮಾ ನಡೆಸಿಕೊಡುವ ‘ಆಪ್​ ಕಿ ಅದಾಲತ್​’ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಅತಿಥಿ ಆಗಿ ಬಂದಿದ್ದರು. ಈ ವೇಳೆ ಸಲ್ಮಾನ್ ಜೀವನದ ಎಲ್ಲಾ ಹಂತ ಹಾಗೂ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಹಳೆಯ ರಿಲೇಶನ್​ಶಿಪ್ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ‘ಇಂದು ನನ್ನ ಎಲ್ಲಾ ಎಕ್ಸ್​​ಗಳು ಒಳ್ಳೆಯ ಸ್ಥಾನದಲ್ಲಿದ್ದಾರೆ, ಖುಷಿಯಾಗಿದ್ದಾರೆ. ಅವರು ಇಂದು ನನ್ನ ಜೊತೆ ಇರದೇ ಇರಲು ನನ್ನ ತಪ್ಪೇ ಕಾರಣ’ ಎಂದಿದ್ದಾರೆ.

‘ಪ್ರೀತಿಯಲ್ಲಿ ನಾನು ದುರಾದೃಷ್ಟವಂತ. ಎಲ್ಲರೂ ಒಳ್ಳೆಯವರಾಗಿದ್ದರು. ಆದರೆ, ತಪ್ಪು ನನ್ನದೇ. ಮೊದಲ ವ್ಯಕ್ತಿ ಬಿಟ್ಟು ಹೋದಾಗ ತಪ್ಪು ಅವರದ್ದು ಅನಿಸುತ್ತದೆ. ಇದು ಪದೇಪದೇ ರಿಪೀಟ್ ಆದಾಗ ಅನುಮಾನ ಬರುತ್ತದೆ. ತಪ್ಪು ಅವರದ್ದೋ ಅಥವಾ ನನ್ನದೋ ಎನ್ನುವ ಪ್ರಶ್ನೆ ಮೂಡುತ್ತದೆ. ನನ್ನ ಜೀವನದಲ್ಲಿ ವಿಶೇಷವಾದ ಯಾರಾದರೂ ಬರಬಹುದು ಎಂಬ ಭರವಸೆಯನ್ನು ಹೊಂದಿದ್ದೇನೆ’ ಎಂದು ಸಲ್ಮಾನ್ ಹೇಳಿದ್ದಾರೆ.

ರಜತ್ ಶರ್ಮಾ ನಡೆಸಿಕೊಡುವ ‘ಆಪ್​ ಕಿ ಅದಾಲತ್​’ಗೆ ಸಲ್ಮಾನ್ ಖಾನ್ ಅತಿಥಿ ಆಗಿ ಬಂದಿದ್ದರು. ಅವರು ಜೀವನದ ಎಲ್ಲಾ ಹಂತ ಹಾಗೂ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಹಳೆಯ ರಿಲೇಶನ್​ಶಿಪ್ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ‘ಇಂದು ನನ್ನ ಎಲ್ಲಾ ಎಕ್ಸ್​​ಗಳು ಒಳ್ಳೆಯ ಸ್ಥಾನದಲ್ಲಿದ್ದಾರೆ, ಖುಷಿಯಾಗಿದ್ದಾರೆ. ಅವರು ಇಂದು ನನ್ನ ಜೊತೆ ಇರದೇ ಇರಲು ನನ್ನ ತಪ್ಪೇ ಕಾರಣ’ ಎಂದಿದ್ದಾರೆ ಸಲ್ಲು.

ಹೆಚ್ಚೆಚ್ಚು ಮಂದಿ ನಮ್ಮನ್ನು ಬಿಟ್ಟು ಹೋದರು ಎಂದರೆ ಆಗ ತಪ್ಪು ನಮ್ಮದೇ ಅನ್ನೋದು ಖಚಿತವಾಗುತ್ತದೆ. ಅವರಲ್ಲಿ ಯಾವುದೇ ತಪ್ಪಿರಲಿಲ್ಲ. ತಪ್ಪೆಲ್ಲ ನನ್ನದೇ. ಅವರು ಅಂದುಕೊಂಡ ರೀತಿಯ ಜೀವನ, ಖುಷಿಯನ್ನು ನನಗೆ ನೀಡಲು ಆಗದಿದ್ದರೆ ಎನ್ನುವ ಭಯ ಇದ್ದೇ ಇತ್ತು. ನನ್ನನ್ನು ಬಿಟ್ಟು ಹೋದ ಎಲ್ಲರೂ ಖುಷಿಯಿಂದ ಇದ್ದಾರೆ ಎಂದು ಮಾಜಿ ಪ್ರೇಯಸಿ ಐಶ್ವರ್ಯ ರೈ, ಕತ್ರಿನಾ ಕೈಫ್ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

Loading

Leave a Reply

Your email address will not be published. Required fields are marked *