ಟಾಲಿವುಡ್ ಬ್ಯೂಟಿ ನಟಿ ಸಮಂತಾ ಕಳೆದ ಕೆಲ ಸಮಯದಿಂದ ಮಯೋಸೈಟೀಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸಮಂತಾ ಅನೇಕ ರೀತಿಯ ಚಿಕಿತ್ಸೆಯ ಚಿಕಿತ್ಸೆಗಳ ಮೊರೆ ಹೋಗಿದ್ದು ಇದೀಗ ಮತ್ತೊಂದು ಥೆರಪಿಗೆ ಒಳಗಾಗಿದ್ದಾರೆ.
ಕಾಯಿಲೆಯಿಂದ ಹೊರ ಬರಲು ಸಮಂತಾ ಐಸ್ ಥೆರಫಿಗೆ ಒಳಗಾಗಿದ್ದು ಅದರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಯಾತನೆ ಥೆರಪಿ ಎಂದು ಸಮಂತಾ ಬರೆದುಕೊಂಡಿದ್ದಾರೆ. ಅಲ್ಲದೇ, ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಕುರಿತು ತಿಳಿಸಿದ್ದಾರೆ.
ಈ ಐಸ್ ಬಾತ್ ಥೆರಪಿಯು ಚಿತ್ರಹಿಂಸೆಯಿಂದ ಕೂಡಿರುವಂಥದ್ದು. ಆದರೂ, ಅನಿವಾರ್ಯ ಎಂದು ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಹಿಂಸೆ ಅನಿಸಿದರೂ ದೇಹಕ್ಕೆ ಚೈತನ್ಯವನ್ನು ನೀಡುವಂಥದ್ದು ಎಂದು ಹೇಳಿಕೊಂಡಿದ್ದಾರೆ.