ಹಾಟ್ ಫೋಟೋ ಹಂಚಿಕೊಂಡು ಟೀಕಾಕಾರರಿಗೆ ತಿರುಗೇಟು ನೀಡಿದ ಖುಷ್ಬೂ ಪುತ್ರಿ

ಚೆನ್ನೈ: ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರ ಪುತ್ರಿ ಆವಂತಿಕಾ ಸದ್ಯ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಹಾಟ್ ಫೋಟೋಗಳು ಸಖತ್ ವೈರಲ್ ಆಗಿದೆ. ಈ ಮೂಲಕ ಟೀಕಾಕಾರರಿಗೆ ಆವಂತಿಕಾ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಆವಂತಿಕಾ ಸಾಕಷ್ಟು ದಪ್ಪಗಿದ್ದ ಕಾರಣದಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದರು. ಇದೀಗ ಈಕೆ ಸಖತ್ ಸ್ಲೀಮ್ ಆಗಿದ್ದು ಬೋಲ್ಡ್​ ಫೋಟೋಗಳ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ.

ಖುಷ್ಬೂ ಅವರು ಸಹ ಈ ಹಿಂದೆ ದಪ್ಪಗಿದ್ದರು. ಅವರು ಕೂಡ ಸುಮಾರು 20 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಇದೀಗ ಅಮ್ಮನಂತೆ ಮಗಳು ಕೂಡ ಸ್ಲಿಮ್​ ಆಗಿದ್ದಾರೆ. ಆವಂತಿಕಾ ಅವರು ಖುಸ್ಬೂ ಸುಂದರ್ ಮತ್ತು ನಿರ್ದೇಶಕ ಸುಂದರ್ ಸಿ ಅವರ ಪುತ್ರಿ. ಖುಷ್ಬೂ ಜತೆಗೆ ಆವಂತಿಕಾ ಕೂಡ ದಡೂತಿ ದೇಹದಿಂದ ಒಂದು ಕಾಲದಲ್ಲಿ ಟ್ರೋಲಿಗರಿಗೆ ದಾಳವಾಗಿದ್ದರು. ಇಗ ಅದೇ ಟೀಕಾಕಾರರು ಅಮ್ಮ-ಮಗಳ ದೇಹ ಪರಿವರ್ತನೆ ಕಂಡು ಹುಬ್ಬೇರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಖುಷ್ಬೂ ಮಗಳು ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರ್ತಿದ್ದು ಈ ಬಗ್ಗೆ ಖುಷ್ಭೂ ಆಗಲಿ ಆವಂತಿಕಾ ಆಗಲಿ ಯಾವುದೇ ಮಾಹಿತಿ ನೀಡಿಲ್ಲ.

Loading

Leave a Reply

Your email address will not be published. Required fields are marked *