ಕಳೆದೊಂದು ವಾರದಿಂದ ತಮಿಳಿನ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಮೇಲೆ ಒಬ್ಬರ ನಂತರ ಒಬ್ಬರು ಮುಗಿಬೀಳುತ್ತಿದ್ದಾರೆ. ಮೊನ್ನೆಯಷ್ಟೇ ನಟಿ ರೋಜಾ ರಜನಿಕಾಂತ್ ವಿರುದ್ಧ ಗರಂ ಆಗಿದ್ದರು. ಇದೀಗ ಹಿರಿಯ ನಟ ಪೋಸಾನಿ ಕೃಷ್ಣ ಮುರುಳಿ ಕೂಡ ರಜನಿ ವಿರುದ್ಧ ಕಿಡಿಕಾರಿದ್ದಾರೆ.
ನಮಗೆ ಸೂಪರ್ ಸ್ಟಾರ್ ಅಂದರೆ ರಜನಿಕಾಂತ್ ಅಲ್ಲ ಬದಲಾಗಿ ಚಿರಂಜೀವಿ ಎನ್ನುವ ಮೂಲಕ ರಜನಿಕಾಂತ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಇತ್ತೀಚೆಗೆ ಮಾಜಿ ಸಿಎಂ ಎನ್.ಟಿ.ಆರ್ ಅವರ ನೂರನೇ ಜನ್ಮದಿನದ ಪ್ರಯುಕ್ತ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ರಜನಿ ಹೊಗಳಿದ್ದರು. ಇದು ರಾಜಕೀಯ ಅಂಗಳದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ಚಂದ್ರುಬಾಬು ನಾಯ್ಡು ಅವರನ್ನು ಹೊಗಳಿದ ಕಾರಣದಿಂದಾಗಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸದಸ್ಯರು ರಜನಿಕಾಂತ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರಜನಿಕಾಂತ್ ಮಾತಿಗೆ ನಾವು ಗೌರವ ಕೊಡುವುದಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ರಜನಿಕಾಂತ್ ಆಂಧ್ರಕ್ಕೆ ಬಂದು ರಾಜಕಾರಣ ಮಾಡುವುದು ಸರಿಯಲ್ಲ ಎಂದಿದ್ದಾರೆ.