ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸೌತ್ ಬ್ಯೂಟಿ ಸಮಂತಾ ನಂ 1

ಸೌತ್ ಬ್ಯೂಟಿ ನಟಿ ಸಮಂತಾ ಇತ್ತೀಚೆಗೆ ನಟಿಸಿರುವ ಸಿನಿಮಾ ಹೇಳಿಕೊಳ್ಳುವ ಮಟ್ಟಿಗಿನ ಸದ್ದು ಮಾಡುತ್ತಿಲ್ಲ. ಪುಷ್ಪ ಸಿನಿಮಾದ ಬಳಿಕ ಸಮಂತಾ ಹೆಚ್ಚು ಸುದ್ದಿಯಾಗಿದ್ದು ತಮ್ಮ ಆರೋಗ್ಯದ ವಿಚಾರವಾಗಿವೆ. ಆದರೂ ಸಮಂತಾ ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿದ್ದಾರೆ.

ಐಎಂಡಿಬಿ ಪ್ರಕಟಿಸಿರುವ ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಮಂತಾ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿರುವುದಕ್ಕೆ ಅಭಿಮಾನಿಗಳಿಗೆ ಸಹಜವಾಗಿಯೇ ಖುಷಿ ಆಗಿದೆ. ಅನೇಕರು ಸಮಂತಾಗೆ ಶುಭ ಹಾರೈಸಿದ್ದಾರೆ. ಇನ್ನೂ ಎತ್ತರಕ್ಕೆ ನೀವು ಬೆಳೆಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಎಲ್ಲ ನೋವಿನಿಂದ ಬೇಗ ಆಚೆ ಬರುವಂತೆ ಮನವಿ ಮಾಡಿದ್ದಾರೆ.

ಸದ್ಯ ಸಮಂತಾ ಸಿಟಾಡೆಲ್ ವೆಬ್ ಸೀರಿಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಅಲ್ಲಿಯೇ ತಮ್ಮ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದರು. ಅಲ್ಲದೇ, ಐಸ್ ಬಾತ್ ಥಿರೇಪಿಗೂ ಅವರು ಒಳಗಾಗಿದ್ದರು. ಆ ಅನುಭವನ್ನು ನಿನ್ನೆಯಷ್ಟೇ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಅಲ್ಲದೇ, ಅದೊಂದು ಯಮಯಾತನೆಯ ನೋವು ಎಂದು ಹೇಳಿದ್ದರು. ಸಾಕಷ್ಟು ನೋವುಗಳ ನಡುವೆಯೂ ಸಮಂತಾ ನಂಬರ್ ವನ್ ಪಟ್ಟ ಅಲಂಕಿರಿಸುರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿಯಾಗಿದೆ.

Loading

Leave a Reply

Your email address will not be published. Required fields are marked *