ಕರೆಂಟ್ ಬಿಲ್ ಕೇಳಲು ಬಂದರೆ ನನ್ನನ್ನು ಕರೆಯಿರಿ, ನಾನು ಬರ್ತೀನಿ: ಸುರೇಶ್ ಗೌಡ

ಮಂಡ್ಯ: ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರ ಡೈಲಾಗ್ ಹೇಳಿ ಕಾಂಗ್ರೆಸ್‌ನ (Congress) ಗ್ಯಾರಂಟಿಗಳ ಬಗ್ಗೆ ಮಂಡ್ಯ ಜಿಲ್ಲೆ ನಾಗಮಂಗಲದ ಜೆಡಿಎಸ್ ಮಾಜಿ ಶಾಸಕ ಸುರೇಶ್‌ ಗೌಡ (Suresh Gowda) ಕುಟುಕಿದ್ದಾರೆ.ನಾಗಮಂಗದಲ್ಲಿ (Nagamangala) ಮತದಾರರಿಗೆ ಧನ್ಯವಾದ ಹೇಳಲು ನಡೆದ ಸಭೆಯಲ್ಲಿ ಮಾತನಾಡಿದ ಅವರು,

ಕಾಂಗ್ರೆಸ್ ಭರವಸೆಗಳನ್ನು ಲೇವಡಿ ಮಾಡಿದ್ದಾರೆ. ಇವತ್ತು ಸುಳ್ಳು ಭರವಸೆ ಮೂಲಕ ಸರ್ಕಾರ ಬಂದಿದೆ. ಯಾರೂ ಕರೆಂಟ್ ಬಿಲ್ ಕಟ್ಟಬೇಡಿ, ಕರೆಂಟ್ ಬಿಲ್ ಕೇಳಲು ಬಂದರೆ ನನ್ನನ್ನು ಕರೆಯಿರಿ. ನಾನು ಬರ್ತೀನಿ. ಮಹಿಳೆಯರಿಗೆ ಫ್ರೀ ಬಸ್, ಬಸ್ ಹತ್ತಿ ಕುಳಿತುಕೊಳ್ಳಿ. ಯಾರೂ ಬಸ್ ಟಿಕೆಟ್ ತೆಗೆದುಕೊಳ್ಳಬೇಡಿ. ನಂಗೂ ಫ್ರೀ, ನಿನಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ಉಚಿತ, ಖಚಿತ, ನಿಶ್ಚಿತ ಎಂದು ಟೀಕೆ ಮಾಡಿದರು.

ರಾಮಲಿಂಗಾ ರೆಡ್ಡಿ (Ramalinga Reddy) ಆ ಖಾತೆಯಲ್ಲಿ ದುಡ್ಡೇ ಬರಲ್ಲ. ನನಗೆ ಸಚಿವ ಸ್ಥಾನ ಬೇಡ, ದಮ್ಮಯ್ಯ ಎನ್ನುತ್ತಿದ್ದಾರೆ. ದುಡ್ಡು ಇಲ್ಲದೆ ಇಂಧನ ಇಲಾಖೆ ಹೇಗೆ ನಡೆಸೋದು ಎನ್ನುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳದ್ದು ಒಂದೇ ಒಂದು ಗುರಿ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲಿಯೂ ಆದಾಯವಿಲ್ಲ. ಕರ್ನಾಟಕ ರಾಜ್ಯವೇ ಕಾಂಗ್ರೆಸ್‌ಗೆ ಆದಾಯ. ಮುಂದಿನ ಚುನಾವಣೆಗೆ ದುಡ್ಡು ಮಾಡಿಕೊಳ್ಳಬೇಕು. ದೇಶದಲ್ಲಿ ಅಧಿಕಾರ ಹಿಡಿಯಲು ಕರ್ನಾಟಕದ ದುಡ್ಡು ಬೇಕಾಗಿದೆ. ಬಿಜೆಪಿವರದ್ದು (BJP) ಕೂಡ ಅದೇ ದೃಷ್ಟಿ ಇತ್ತು ಎಂದು ವಾಗ್ದಾಳಿ ನಡೆಸಿದರು.

Loading

Leave a Reply

Your email address will not be published. Required fields are marked *