ಕಲುಷಿತ ನೀರು ಸೇವಿಸಿ 38ಕ್ಕೂ ಹೆಚ್ಚು ಮಂದಿ ಅಸ್ವಸ್ಥ..!

ರಾಚೂರುಜಿಲ್ಲೆಯ ದೇವ​ದುರ್ಗ ಸಮೀ​ಪದ ಅರ​ಕೇರಾ ತಾಲೂ​ಕಿನ ರೇಕ​ಲ​ಮ​ರ​ಡಿ ಗ್ರಾಮ​ದಲ್ಲಿ ಕಲು​ಷಿತ ನೀರು ಕುಡಿದು ಬಾಲಕನೊಬ್ಬ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಇದೀಗ ಲಿಂಗ​ಸು​ಗೂರು ತಾಲೂ​ಕಿನಲ್ಲಿ ಇದೇ ರೀತಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 38ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.

ಲಿಂಗಸಗೂರು ತಾಲೂಕಿನ ಗೊರೇ​ಬಾಳ ಗ್ರಾಮ​ದಲ್ಲಿ 30 ಹಾಗೂ ತಾಲೂ​ಕಿನ ಜೂಲ​ಗು​ಡ್ಡ​ದ​ಲ್ಲಿ 8 ಮಂದಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾರೆ.

ಗೋರೆಬಾಳ ಗ್ರಾಮಕ್ಕೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಭೇಟಿ ನೀಡಿದ್ದು, ಮೂರು ದಿನಗಳಲ್ಲಿ ವಿಷಪೂರಿತ ಆಹಾರ ಮತ್ತು ಕಲುಷಿತ ಕುಡಿಯುವ ನೀರು ಸೇವನೆಯಿಂದ ಸಂಭವಿಸಿದೆ ಎನ್ನಲಾದ ಪ್ರಕರಣಗಳ ಕುರಿತು ಪರೀಶೀಲನೆ ನಡೆಸಲಾಗಿದೆ. ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಚಿಕಿತ್ಸಾ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ಈಗಾಗಲೇ 10 ರೋಗಿಗಳನ್ನು ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Loading

Leave a Reply

Your email address will not be published. Required fields are marked *