ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾನ್ವಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಕೆಲ ಸಮಯವೇ ಕಳೆದಿದೆ. ಆದರೆ ಬಟೌನ್ ನಲ್ಲಿ ಆಕೆಗೆ ಹೇಳಿಕೊಳ್ಳುವ ಯಶಸ್ಸು ಸಿಕ್ಕಿಲ್ಲ. ಸದ್ಯ ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿರುವ ಜಾನ್ವಿ ಇದೀಗ ಮತ್ತೊಂದು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕೊರಟಾಲ ಶಿವ ಹಾಗೂ ಜ್ಯೂ. ಎನ್‌ಟಿಆರ್ ಕಾಂಬಿನೇಷನ್ ಚಿತ್ರಕ್ಕೆ ನಾಯಕಿಯಾಗಿ ಜಾನ್ವಿ ಆಯ್ಕೆ ಆಗಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು ಈ ಮಧ್ಯೆ ಮತ್ತೊಂದು ತೆಲುಗು ಚಿತ್ರಕ್ಕೆ ಜಾನ್ವಿ ಹೆಸರು ಕೇಳಿಬರ್ತಿದೆ.
5 ವರ್ಷಗಳ ಹಿಂದೆ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್‌ಗೆ ಜಾನ್ವಿ ಎಂಟ್ರಿ ಕೊಟ್ಟರು. ಆದರೆ ಈವರೆಗೆ ದೊಡ್ಡ ಬ್ರೇಕ್ ಸಿಗಲಿಲ್ಲ. ಹಾಗಾಗಿ ನಿಧಾನವಾಗಿ ಸೌತ್ ಸಿನಿದುನಿಯಾ ಕಡೆ ಮುಖ ಮಾಡಿದ್ದಾರೆ. ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಗೆದ್ದ ಮೇಲೆ ಶ್ರೀದೇವಿ ಬಾಲಿವುಡ್ ಪ್ರವೇಶಿಸಿದ್ದರು. ಇದೀಗ ಜಾನ್ವಿ ಕೂಡ ತಾಯಿಯಂತೆ ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.
ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ಜೋಡಿಯಾಗಿ ಜಾನ್ವಿ ನಟಿಸ್ತಾರೆ ಎನ್ನುವ ಗುಸುಗುಸು ಟಾಲಿವುಡ್‌ನಲ್ಲಿ ಶುರುವಾಗಿದೆ. ಯುವಿ ಕ್ರಿಯೇಷನ್ಸ್ ಸಂಸ್ಥೆ ನಾಗ್ ಕಿರಿಯ ಪುತ್ರನ ಜೊತೆ ಕ್ರೇಜಿ ಪ್ರಾಜೆಕ್ಟ್ ಪ್ಲ್ಯಾನ್ ಮಾಡ್ತಿದೆ. ಇದಕ್ಕೆ ‘ಧೀರ’ ಅನ್ನುವ ಟೈಟಲ್ ಇಡಲು ಚಿತ್ರತಂಡ ನಿರ್ಧರಿಸಿದೆ.
ನಟ ಅಖಿಲ್ ಅಕ್ಕಿನೇನಿ ಕೂಡ ಒಂದೊಳ್ಳೆ ಸಕ್ಸಸ್ ಸಿನಿಮಾಗಾಗಿ ಕಾಯ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಏಜೆಂಟ್’ ಸಿನಿಮಾ ಹೀನಾಯವಾಗಿ ಮುಗ್ಗರಿಸಿತ್ತು. ಮೊದಲ ದಿನವೇ ನೆಗೆಟಿವ್ ಟಾಕ್ ಕೇಳಿ ಬಂದಿತ್ತು. ಸ್ವತಃ ನಿರ್ಮಾಪಕರು ಬಹಿರಂಗವಾಗಿ ಸಿನಿಮಾ ಸೋಲು ಒಪ್ಪಿಕೊಂಡಿದ್ದು, ಪ್ರೇಕ್ಷಕರ ಕ್ಷಮೆ ಕೇಳಿದ್ದರು. ಹೀಗಾಗಿ ಜಾನ್ವಿ ಅಖಿಲ್ ಗೆ ಅದೃಷ್ಟದ ನಾಯಕಿಯಾಗ್ತಾರಾ ಕಾದು ನೋಡಬೇಲಿದೆ.