ಟಿಬಿಲಿಸಿ: 23 ವರ್ಷದ ಯುವತಿಯೊಬ್ಬಳು ಏಕ ಕಾಲದಲ್ಲಿ ಸಾವಿರ ಬಾಯ್‍ಫ್ರೆಂಡ್‍ಗಳನ್ನು ಹೊಂದಿದ್ದು, ಅವರೊಂದಿಗೆ ಡೇಟ್ ಮಾಡಲು ಗಂಟೆಗೆ 5,000 ರೂ. ಸಂಭಾವನೆಯನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸೋಶಿಯಲ್ ಮಿಡಿಯಾ ಇನ್ಫೂಯೆನ್ಸರ್ ಆಗಿರುವ ಜಾರ್ಜಿಯಾದ ಕಮ್ಮಿಂಗ್ ನಿವಾಸಿ ಕ್ಯಾರಿನ್ ಮಾರ್ಜೋರಿ ಸಾವಿರ ಬಾಯ್ ಫ್ರೆಂಡ್ ಗಳನ್ನು ಹೊಂದಿರುವ ಯುವತಿ.
ಈಕೆ ಸ್ನ್ಯಾಪ್ ಚಾಟ್‍ನಲ್ಲಿ 1.8 ಮಿಲಿಯನ್ ಫಾಲೋವರ್‍ಗಳನ್ನು ಹೊಂದಿದ್ದಾಳೆ.
1,000 ಬಾಯ್‍ಫ್ರೆಂಡ್‍ಗಳನ್ನು ಹೊಂದಿರುವ ಈಕೆ ಈ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಆ ಎಲ್ಲಾ ಬಾಯ್‍ಫ್ರೆಂಡ್‍ಗಳು ಭೇಟಿ ಆಗಲು ನಿಮಿಷಕ್ಕೆ 1 ಡಾಲರ್ (80 ರೂ.) ಶುಲ್ಕ ವಿಧಿಸುತ್ತಿದ್ದಾಳೆ. ಗೆಳೆಯರ ಜೊತೆ ಡೇಟಿಂಗ್ ಮಾಡಲು ಎಐ ಕ್ಲೋನ್ ಎಂಬ ಆಯಪ್ ಅನ್ನು ಮಾಡಿಕೊಂಡಿದ್ದಾಳೆ. ಈ ಮೂಲಕ ಗೆಳೆಯರು ಅವಳ ಜೊತೆ ಡೇಟಿಂಗ್ ಮಾಡಲು ಸಮಯವನ್ನು ತೆಗೆದುಕೊಳ್ಳಬಹುದಾಗಿದೆ.
ಎಐ ಆಯಪ್ ಮೂಲಕವಾಗಿ ಬಳಕೆದಾರರಿಗೆ ಕ್ಯಾರಿನ್ ಅನೇಕ ರೀತಿಯ ಆಯ್ಕೆಗಳಿರುತ್ತವೆ. ಅದರಲ್ಲಿ ಎಲ್ಲ ಆಯ್ಕೆಗೂ ಒಂದೊಂದು ರೀತಿಯ ದರವನ್ನು ಫಿಕ್ಸ್ ಮಾಡಿದ್ದಾಳೆ. ಈ ಆಯಪ್‍ನಲ್ಲಿ ಆಕೆ ಇರುವ ಪ್ರದೇಶವನ್ನು ಗುರುತಿಸಲು ಮತ್ತು ಲೈಂಗಿಕ ಕ್ರಿಯೆಯನ್ನು ನಡೆಸಲು ಇನ್ನೂ ಅನೇಕ ರೀತಿ ಆಯ್ಕೆಗಳು ಇವೆ ಎಂದು ಹೇಳಲಾಗುತ್ತಿದೆ.