ಬೆಂಗಳೂರು: ನಿನ್ನೆ ನೂತನ ಸಂಸತ್ ಭವನದ ಉದ್ಘಾಟನೆಯ ವೇಳೆಯಲ್ಲೇ ನ್ಯಾಯಕ್ಕಾಗಿ ಒತ್ತಾಯಿಸಿ ಕ್ರೀಢಾಪಟುಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿದ ನಡೆಗೆ ತೀವ್ರ ಆಕ್ಷೇಪ ದೇಶಾದ್ಯಂತ ವ್ಯಕ್ತವಾಗಿತ್ತು. ಕರ್ನಾಟಕ ಕಾಂಗ್ರೆಸ್ ಕೂಡ ಬಿಜೆಪಿಯವರ ಪ್ರಕಾರ ನ್ಯಾಯ ಕೇಳುವುದು ಹಾಗೂ ಪ್ರಶ್ನಿಸುವುದು ದೇಶದ್ರೋಹವಾಗಿ ಬದಲಾಗಿದೆ ಎಂದು ಕಿಡಿಕಾರಿದೆ.
ಈ ಕುರಿತಂತೆ ಟ್ವಿಟ್ ಮಾಡಿದ್ದು, ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸಿದವರು – ದೇಶದ್ರೋಹಿಗಳು ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟಿಸಿದವರು – ದೇಶದ್ರೋಹಿಗಳು ಅತ್ಯಾಚಾರಿಯ ವಿರುದ್ಧ ನ್ಯಾಯ ಕೇಳುವ ಕ್ರೀಡಾಪಟುಗಳು – ದೇಶದ್ರೋಹಿಗಳು. ಇದು ಬಿಜೆಪಿಯ ವರಸೆ. ಬಿಜೆಪಿ ಪ್ರಕಾರ ‘ನ್ಯಾಯ’ ಕೇಳುವುದು ಹಾಗೂ ಪ್ರಶ್ನಿಸುವುದು ದೇಶದ್ರೋಹವಾಗಿ ಬದಲಾಗಿದೆಯೇ? ಎಂದು ಪ್ರಶ್ನಿಸಿದೆ.