ಬೆಂಗಳೂರು: ನೈರುತ್ಯ ರೈಲ್ವೆ ಇಲಾಖೆಯಿಂದ ಪ್ರಯಾಣಿಕರ ಕೊರತೆ, ಆದಾಯ ಕಡಿಮೆಯ ಕಾರಣದಿಂದಾಗಿ ಕೆಲ ಮಾರ್ಗದಲ್ಲಿನ 7 ಹಾಲ್ಟ್ ನಿಲ್ದಾಣಗಳನ್ನು ಜೂನ್.1ರಿಂದ ಬಂದ್ ಮಾಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ನೈರುತ್ಯ ರೈಲ್ವೆ ಇಲಾಖೆಯ, ಜೂನ್ 1 ರಿಂದ ಅನ್ವಯವಾಗುವಂತೆ ವಿಜಯವಾಡ ವಿಭಾಗದ ಈ ಕೆಳಗಿನ ಏಳು ಹಾಲ್ಟ್ ನಿಲ್ದಾಣವನ್ನು ಕೆಲವು ಕಾರಣಾಂತರದಿಂದ ಬಂದ ಮಾಡಲು ದಕ್ಷಿಣ ಮಧ್ಯ ರೈಲ್ವೆ ವಲಯವು ನಿರ್ಧರಿಸಿದೆ ಎಂದಿದೆ.