ರಾಜ್ಯದಲ್ಲಿ ಮತ್ತೆ ಪಠ್ಯ ಪರಿಷ್ಕರಣೆ

ಬೆಂಗಳೂರು: ಈ ಬಾರಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರವು ಪಠ್ಯ ಪುಸ್ತಕದ ಬದಲಾವಣೆ ಮಾಡಲಾಗುವುದು ಎನ್ನಲಾಗಿದೆ. ಕಳೆದ ವರ್ಷ ಬರೀ ವಿವಾದದಿಂದಲೇ ಸುದ್ದಿಯಾಗಿದ್ದ ರಾಜ್ಯದ ಪಠ್ಯಕ್ರಮ ಈ ಬಾರಿ ಕೂಡ ಹೆಚ್ಚು ಚರ್ಚೆಯಾಗುವುದರಲ್ಲಿ ಅನುಮಾನವಿಲ್ಲ.ಈಗಾಗಲೇ ಶಿಕ್ಷಣ ತಜ್ಞನರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ರಾಜ್ಯದಲ್ಲಿ ಮಕ್ಕಳಿಗೆ ವಿಷ ಬೀಜ ಬಿತ್ತುವ ಪಠ್ಯಗಳನ್ನು ಕೈ ಬಿಡಬೇಕು, ಇದಲ್ಲದೇ ಈ ಹಿಂದೆ ಬಿಜೆಪಿ ಸರ್ಕಾರ, ಪಠ್ಯ ಪರಿಷ್ಕರಣೆ ಸಂಬಂಧಪಟ್ಟಂತೆ, ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚಿಸಿತ್ತು ಆಗ ಅವರು ತೆಗೆದುಕೊಂಡು ನಿರ್ಧಾರಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಕೂಗು ಕೇಳಿ ಬುತ್ತಿದೆ. ರೋಹಿತ್‌ ಚಕ್ರತೀರ್ಥ ಯಾವುದೇ ಸಭೆಗಳನ್ನು, ಚರ್ಚೆಗೆ ಅವಕಾಶವನ್ನೇ ಕೊಡದೇ ಹಲವು ಮಂದಿಗಳ ಪಠ್ಯ ಕ್ರಮಗಳಿಗೆ ಕೊಕ್ ನೀಡಿ ಪಠ್ಯಕ್ರಮವನ್ನು ತಮಗೆ ಬಂದ ಹಾಗೇ ಮಾಡಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಇನ್ನೂ ಈ ನಡುವೆ ಸಾಹಿತಿಗಳಿಗೆ ಜೀವ ಬೆದರಿಕೆ ಹಾಕುವ ಕಿಡಿಗೇಡಿಗಳ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಅಂತಹವರ ವಿರುದ್ದ ಕೂಡ ಕಠಿಣ ಕ್ರಮವನ್ನು ಕೈಗೊಳ್ಳುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

Loading

Leave a Reply

Your email address will not be published. Required fields are marked *