ಮದುವೆ ದಿನ ಓಡಿ ಹೋದ ವರನನ್ನು ಬೆನ್ನಟ್ಟಿ ಹಿಡಿದು ತಂದು ಮದುವೆಯಾದ ವಧು

ಪ್ರೀತಿ ಮಾಡುವಾಗ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಮದುವೆ ಎಂಬ ಮಾತು ಬಂದಾಗ ಕೆಲವರು ಒಪ್ಪದೇ ಇರುವುದನ್ನು ನೀವು ನೋಡಿರಬಹುದು. ಪ್ರೀತಿ ಮಾಡಿ ಮೋಸ ಮಾಡುವವರು ಅನೇಕರಿದ್ದಾರೆ. ಹಾಗೆಯೇ ಇಲ್ಲೊಬ್ಬ ದಿಟ್ಟ ಯುವತಿ ಎರಡು ವರ್ಷದಿಂದ ಪ್ರೀತಿಸಿದ ಯುವಕನನ್ನೇ ಮದುವೆಯಾಗಿದ್ದಾಳೆ.

ಅದರಲ್ಲೇನೋ ವಿಶೇಷ ಅಂತೀರಾ? ಹಾಗಿದ್ರೆ ಮುಂದೆ ಓದಿ.

ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ವರ್ಷದಿಂದ ಪರಸ್ಪರ ಯುವಕ-ಯುವತಿ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಇನ್ನೇನು ಮದುವೆಯೆಂಬ ಬಂಧ ಏರ್ಪಟ್ಟಿದೆ ಎನ್ನುವಾಗ ಹೇಳದೆ ಕೇಳದೆ ಯುವಕ ಓಡಿಹೋಗಿದ್ದಾನೆ. ಆದರೆ, ವಧು ಅಷ್ಟಕ್ಕೇ ಸುಮ್ಮನಾಗದೆ 20 ಕಿ.ಮೀ ದೂರದವರೆಗೆ ಆತನನ್ನು ಬೆನ್ನಟ್ಟಿ ಹೋಗಿ ಕಲ್ಯಾಣ ಮಂಟಪಕ್ಕೆ ಕರೆತಂದು ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾಳೆ.

ಬಾರಾಬಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಬರದರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಜೋಡಿ ಕಳೆದ ಎರಡು ವರ್ಷಗಳಿಂದ ಸಂಬಂಧದಲ್ಲಿದ್ದರು. ಸಾಕಷ್ಟು ನಾಟಕೀಯ ಬೆಳವಣಿಗೆಗಳ ನಂತರ, ಭೂತೇಶ್ವರನಾಥ ದೇವಸ್ಥಾನದಲ್ಲಿ ಮದುವೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Loading

Leave a Reply

Your email address will not be published. Required fields are marked *