ಮೈಸೂರು: ಸ್ನೇಹಿತರ ಜೊತೆಗೆ ತಲಕಾಡಿಗೆ ತೆರಳಿದ್ದಂತ ಇಬ್ಬರು ಬಾಲಕರು, ಕಾವೇರಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿಗೆ ಬೆಂಗಳೂರಿನಿಂದ ಸ್ನೇಹಿತರ ಮಕ್ಕಳೊಂದಿಗೆ ಲೋಹಿತ್(15) ಮತ್ತು ಯತೀಶ್ (15) ತೆರಳಿದ್ದರು.
ಕಾವೇರಿ ನದಿ ನೀರಿನಲ್ಲಿ ಆಟವಾಡುವಾಗ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಅಂದಹಾಗೇ ಬೆಂಗಳೂರಿನಿಂದ ನಂದಿನಿ ಲೇಔಟ್ ನಿವಾಸಿ ರವಿಗೌಡ ಎಂಬುವರ ಪುತ್ರರಾಗಿದ್ದರು. ತಲಕಾಡಿಗೆ ಪ್ರವಾಸಕ್ಕೆಂದು ಸ್ನೇಹಿತರ ಜೊತೆಗೆ ಲೋಹಿತ್, ಯತೀಶ್ ತೆರಳಿದ್ದರು. ಇಂದು ಕಾವೇರಿ ನಿಸರ್ಗಧಾಮದ ಬಳಿಯಲ್ಲಿ ನದಿಯಲ್ಲಿ ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು ಮೃತ ಬಾಲಕರ ದೇಹವನ್ನು ಕಾವೇರಿ ನದಿ ನೀರಿನಿಂದ ಆಚೆ ತೆಗೆದಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.