ಬೆಂಗಳೂರು : ರಾಜ್ಯದ ಹಲವು ಕಡೆ ಧಾರಾಕಾರ ಮಳೆಯಾಗಿದ್ದು, ಮಳೆರಾಯನ ಆರ್ಭಟಕ್ಕೆ ರಾಜ್ಯದ ಹಲವು ಕಡೆ ಇದುವರೆಗೆ 8 ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೈಸೂರಿನಲ್ಲಿ ವಿದ್ಯುತ್ ತಂತಿ ತಗುಲಿ ಯುವಕ ಸಾವು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮರಬಿದ್ದು ವ್ಯಕ್ತಿ ಸಾವು, ಕೊಪ್ಪಳ ಜಿಲ್ಲೆಯಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು, ರಾಜಕಾಲುವೆಯಲ್ಲಿ ಯುವಕ ಕೊಚ್ಚಿ ಹೋಗಿದ್ದಾರೆ.
ಹಾಗೆಯೇ ಕೆ ಆರ್ ಸರ್ಕಲ್ ನಲ್ಲಿ ಯುವತಿ ಭಾನುರೇಖಾ ಮೃತಪಟ್ಟಿದ್ದು, ರಾಯಚೂರಿನಲ್ಲಿ ಕೂಡ ರೈತರೊಬ್ಬರು ಸಿಡಿಲಿನ ಬಡಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ ರಾಜ್ಯದ ಹಲವು ಕಡೆ ಸಂಭವಿಸಿದ ಡೆಡ್ಲಿ ಮಳೆ ಆರ್ಭಟಕ್ಕೆ 8 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.