ಬೆಂಗಳೂರು: ಅವಕಾಶಗಳು ಎಲ್ಲರಿಗೂ ಸಿಗುತ್ತೆ, ತಾಳ್ಮೆಯಿಂದ ಇರಿ ಎಂದು ಸಚಿವ ಸ್ಥಾನಾಕಾಂಕ್ಷಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಇಂದಿರಾ ಗಾಂಧಿ ಭವನದಲ್ಲಿ ನಡೆಯುತ್ತಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿಸಿಎಂ ಡಿ.ಕೆ.
ಶಿವಕುಮಾರ್ ಮಾತನಾಡಿದರು. ನಿಮ್ಮ ಗುರಿ ಮುಂದಿನ ಚುನಾವಣೆ, ನೀವು ಸರಿಯಾಗಿ ಕೆಲಸ ಮಾಡಬೇಕು. ನಿಮ್ಮ ಬೂತ್ ಸಿದ್ದಪಡಿಸಿಕೊಳ್ಳಿ ಎಂದರು. ಲೋಸಭಾ ಚುನಾವಣೆಗೂ ಅಸೆಂಬ್ಲಿ ಚುನಾವಣೆಗೂ ವ್ಯತ್ಯಾಸ ಇರುತ್ತೆ ಚುನಾವಣೆಯಲ್ಲಿ ತಿಳಿದುಕೊಳ್ಳಿ ಅಂತ ಕಾರ್ಯಕರ್ತರಿಗೆ ಡಿಕೆಶಿ ಹೇಳಿದ್ದಾರೆ.
ಸುಮ್ಮನೆ ಒನ್ ಮ್ಯಾನ್ ಆರ್ಮಿ ರೀತಿ ಬಂದು ಮಾತನಾಡುವದಲ್ಲ, ನೀವು ಲೋಕಲ್ ನಲ್ಲಿ ಕೆಲಸ ಮಾಡಬೇಕು. ಮುಂದೆ ಲೋಕಸಭಾ ಚುನಾವಣೆಯಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು, ಅವಕಾಶಗಳು ಎಲ್ಲರಿಗೂ ಸಿಗುತ್ತೆ, ತಾಳ್ಮೆಯಿಂದ ಇರಿ ಎಂದು ಸಚಿವ ಸ್ಥಾನಾಕಾಂಕ್ಷಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಮನೆ, ನನ್ನ ಮನೆ ಸುತ್ತುತ್ತ ಇರಬೇಡಿ . ಮುಂದಿನ ಚುನಾವಣೆಗೆ ಕೆಲಸ ಮಾಡಿ ಎಂದು ಶಾಸಕರಿಗೆ, ಕಾರ್ಯಕರ್ತರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದರು.