ಬೆಂಗಳೂರು : ‘ಸಿದ್ದರಾಮಯ್ಯ’ ಸರ್ಕಾರದ ವಿರುದ್ಧ ಫೇಸ್ ಬುಕ್ ( ‘Facebook’) ಪೋಸ್ಟ್ ಹಾಕಿದ್ದ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.
ಸಿದ್ದರಾಮಯ್ಯ ಅವರು 2 ನೇ ಬಾರಿಗೆ ನಿನ್ನೆ ಸಿಎಂ ಆಗಿ ಅಧಿಕಾರ ಸ್ಚೀಕರಿಸಿದ್ದು, ಪ್ರಮಾಣವಚನದ ವೇಳೆ ಸರ್ಕಾರವನ್ನು ಟೀಕಿಸುವ ಬರಹದಲ್ಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಶಿಕ್ಷಕನನ್ನು ಸಸ್ಪೆಂಡ್ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾನುಬೇನಹಳ್ಳಿ ಶಿಕ್ಷಕ ಶಾಂತಮೂರ್ತಿ ಎಂಬುವವರನ್ನು ಅಮಾನತು ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಆದೇಶ ಹೊರಡಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2,42,000 ಕೋಟಿ ರೂ ಸಾಲ ಮಾಡಿದ್ದರು ಎಂದು ಪೋಸ್ಟ್ ಹಾಕಿದ್ದರು. ಈ ಹಿಂದೆ ಎಸ್ ಎಂ ಕೃಷ್ಣ ಅವಧಿಯಲ್ಲಿ 3,590 ಕೋಟಿ ರೂ, ಧರ್ಮಸಿಂಗ್ ಅವಧಿಯಲ್ಲಿ 15,635 ಕೋಟಿ ರೂ, ಹೆಚ್ ಡಿ ಕುಮಾರಸ್ವಾಮಿ ಅವಧಿಯಲ್ಲಿ 3,545 ಕೋಟಿ, ಯಡಿಯೂರಪ್ಪ 25,653 ಕೋಟಿ. ಸದಾನಂದಗೌಡ 9,464 ಕೋಟಿ., ಜಗದೀಶ್ ಶೆಟ್ಟರ್ 13,464 ಕೋಟಿ ಹಾಗೂ ಸಿದ್ದರಾಮಯ್ಯ 2,42,000 ಕೋಟಿ ರೂ ಸಾಲ ಮಾಡಿದ್ದರು.ಸಿದ್ದರಾಮಯ್ಯ ಅವಧಿಯಲ್ಲಿ ಸಾಲಭಾಗ್ಯ ನೀಡಿದ್ದಾರೆ ಎಂದು ಶಿಕ್ಷಕ ಪೋಸ್ಟ್ ಹಾಕಿದ್ದರು.