ಕಂಠೀರವ ಸ್ಟೇಡಿಯಂ ನಲ್ಲಿ ನೂತನ ಸಿಎಂ, ಡಿಸಿಎಂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಕಂಠೀರವ ಸ್ಟೇಡಿಯಂ ನಲ್ಲಿ ವಿವಿಐಪಿ ಎಂಟ್ರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, 2 ಗೇಟ್ ಗಳಲ್ಲಿ ವಾಹನಗಳಿಗೆ ಎಂಟ್ರಿ ನೀಡಲಾಗುತ್ತಿದೆ.
ಓರ್ವ ಪೊಲೀಸ್ ಕಮಿಷನ್, ಇಬ್ಬರು ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. ಕಾರ್ಯಕ್ರಮಗಳಿಗೆ ಬರುವ ವಿವಿಐಪಿಗಳಿಗೆ Z+, CRPF ASL ಪ್ರೊಟೆಕ್ಟ್ರಿಂದ ಭದ್ರತೆ ಒದಗಿಸಲಾಗಿದೆ. 8 ರಾಜ್ಯದ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, Z+ ಮತ್ತು Z ಕ್ಯಾಟಗರಿ ಭದ್ರತೆ ನೀಡಲಾಗುತ್ತಿದೆ. ಕಂಠೀರವ ಕ್ರೀಡಾಂಗಣ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.ಎಂಟು ಮಂದಿ ಡಿಸಿಪಿ ಸೇರಿದಂತೆ 1500 ಕ್ಕೂ ಹೆಚ್ಚು ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸಂಚಾರಿ ನಿರ್ವಹಣೆಗಾಗಿ 500 ಸಂಚಾರಿ ಪೊಲೀಸರ ನಿಯೋಜನೆ ಮಾಡಲಾಗಿದೆ.