ಬೆಂಗಳೂರು: ನಗರದ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ನಿಸರ್ಗ ಲೇಔಟ್ನಲ್ಲಿ ವೃದ್ಧೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಡ್ರಮ್ನಲ್ಲಿ ಮೃತದೇಹ ಇಟ್ಟು ಹಂತಕ ಪರಾರಿಯಾದ ಘಟನೆ ಜರುಗಿದೆ. ಕಳೆದ ಎರಡ್ಮೂರು ದಿನಗಳ ಹಿಂದೆಯೇ ವೃದ್ಧೆಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದ್ದು, ದುರ್ವಾಸನೆ ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ವೃದ್ಧೆಯ ಹೆಸರು ಸುಶೀಲಮ್ಮ. ಕೆ.ಆರ್.ಪುರಂನ ನಿಸರ್ಗ ಲೇಔಟ್ ನಲ್ಲಿ ಅಪಾರ್ಟ್ಮೆಂಟ್ ನಲ್ಲಿ ಕಳೆದ ಎಂಟು ವರ್ಷಗಳಿಂದ ಮೂವರೊಟ್ಟಿಗೆ ವಾಸವಾಗಿದ್ದರು. ೬೫ ವರ್ಷದ ವೃದ್ದೆ ಸುಶೀಲಮ್ಮಗೆ ಯಾವ ಕಾರಣಕ್ಕಾಗಿ ಭೀಕರವಾಗಿ ಕೊಲೆ ಮಾಡಿದ್ದಾರೆ. ವೃದ್ದೆಗೆ ಯಾವ ಕಾರಣಕ್ಕೆ ಕೊಲೆಯಾಗಿದೆ ಸದ್ಯ ತಿಳಿದು ಬಂದಿಲ್ಲ. ಬಾಡಿ ದುರ್ವಾಸನೆ ಬಂದ ಬಳಿಕ ಸ್ಥಳೀಯರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಕೆ.ಆರ್.ಪುರಂ ಪೊಲೀಸರು ಭೇಟಿ ನೀಡಿದಾಗ ಡ್ರಮ್ ನಲ್ಲಿ ಮೃತ ದೇಹ ತುಂಡು ತುಂಡಾಗಿ ಬಿಸಾಡಿದ್ದು ತಿಳಿದಿದೆ.
ಕೊಲೆ ನಡೆದ ಸುತ್ತಮುತ್ತ ಡಾಗ್ ಸ್ಕ್ವಾಡ್ ಹಾಗೂ ಪರಿಶೀಲನೆ ಮಾಡಲಾಗಿದ್ದು, ಎಫ್ ಎಸ್ ಎಲ್ ತಂಡ ಸಾಕ್ಷ್ಯಧಾರಗಳನ್ನ ಕಲೆ ಹಾಕಿದ್ದಾರೆ.ಸದ್ಯ ಹಂತಕರ ಭೇಟೆಗಾಗಿ ಸ್ಪೇಷಲ್ ತಂಡ ರಚಿಸಿದ್ದು ಕೆ.ಆರ್ ಪುರ ಪೊಲಿಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಆರೋಪಿಗಳ ಬಂಧನವಾದ ಬಳಿಕ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.