ಬೆಂಗಳೂರು: ಕೆಂಪೇಗೌಡ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ ಎರಡು ಪ್ರತ್ಯೇಕ ಪ್ರಕರಣ ಪತ್ತೆ ಮಾಡಿದ್ದಾರೆ. ಫೆಬ್ರವರಿ 23ರಂದು ಕೊಲಂಬೋದಿಂದ ಬಂದ ಶ್ರೀಲಂಕಾ ಪ್ರಜೆ ಬಂಧಿಸಿದ ಅಧಿಕಾರಿಗಳು, ಗೋವಾದ ವ್ತಕ್ತಿಗೆ ನೀಡಲು ತಂದಿದ್ದ 288 ಗ್ರಾಂ ತೂಕ, 18ಲಕ್ಷ ಬೆಲೆಯ ಚಿನ್ನ ವಶಕ್ಕೆ ಪಡೆದಿದ್ದಾರೆ. ಒಟ್ಟು ಮೂರು ಜನರ ಬಂಧಿಸಿ ಕಾರ್ಯಾಚರಣೆ ಮುಂದುವರಿಸಿದರು.
ಫೆಬ್ರವರಿ 24ರಂದು ದೇವನಹಳ್ಳಿ ಏರ್ಪೋರ್ಟ್ ನಲ್ಲಿ ಕಸ್ಟಮ್ಸ್ ಕಾರ್ಯಾಚರಣೆ ಕಾರ್ಯಚರಣೆ ನಡೆಸಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ ಪ್ರಕರಣ ಪತ್ತೆ ಮಾಡಿದ್ದಾರೆ. ಮೂರು ಜನ ಶ್ರೀಲಂಕಾ, ಒಬ್ಬ ವಿದೇಶಿ ಇಬ್ಬರು ಭಾರತೀಯರು ಸೇರಿ 6ಜನರನ್ನು ಬಂಧಿಸಿದ್ದಾರೆ. ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿ ದೇವನಹಳ್ಳಿ ಏರ್ಪೋರ್ಟ್ನಲ್ಲು ಖದೀಮರು ಸಿಕ್ಕಿ ಬಿದ್ದಿದ್ದಾರೆ. 878 ಗ್ರಾಂ ತೂಕ 54ಲಕ್ಷ ಬೆಲೆಯ ಚಿನ್ನ ಸಾಗಾಟದ ವೇಳೆ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಎರಡೂ ಪ್ರಕರಣ ದಾಖಲಿಸಿ ದೇವನಹಳ್ಳಿ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.