‘ಕಾಟೇರ’ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಸ್ನೇಹಿತರೊಂದಿಗೆ ಬರ್ತ್ ಡೇ ಪಾರ್ಟಿ ಮಾಡಿದ್ದಾರೆ. ನಿನ್ನೆ ರಾತ್ರಿ ಆತ್ಮೀಯರ ಜೊತೆ ಜನ್ಮದಿನವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಡಿ ಬಾಸ್ʼಗೆ ಆಪ್ತರಾದ ವಿನಯ್ ಅವರು ಚಾಕೊಲೇಟ್ನಿಂದ ದರ್ಶನ್ ಅವರ ಪ್ರತಿಮೆ ಮಾಡಿಸಿದ್ದಾರೆ. ಅದನ್ನು ನೋಡಿ ದರ್ಶನ್ ಖುಷಿಪಟ್ಟಿದ್ದಾರೆ.
250 Kg ತೂಕದ 6.2 ಎತ್ತರದ ಈ ಪ್ರತಿಮೆಯನ್ನು ರಾಮನಗರದಲ್ಲಿ ಅನಾವರಣ ಮಾಡಲಾಗಿದೆ. ದರ್ಶನ್ ಬರ್ತ್ ಡೇ ಪಾರ್ಟಿಯಲ್ಲಿ ತರುಣ್ ಭಾಗಿಯಾಗಿದ್ದರು. ಇತ್ತೀಚೆಗೆ ‘ಕಾಟೇರ’ ಚಿತ್ರದ ಸಕ್ಸಸ್ ಸೆಲೆಬ್ರೇಷನ್ ನಡೆಯಿತು. 50ನೇ ದಿನದ ಸಂಭ್ರಮಾಚರಣೆ ವೇಳೆ ದರ್ಶನ್ ಅವರು ಆಡಿದ ಮಾತುಗಳಿಂದ ವಿವಾದ ಶುರುವಾಗಿದೆ. ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ದರ್ಶನ್ ಅವರು ‘ತಗಡು’ ಎಂದಿದ್ದಕ್ಕೆ ಕೆಲವರಿಂದ ಖಂಡನೆ ವ್ಯಕ್ತವಾಗಿದೆ.