ಚಿಕ್ಕಬಳ್ಳಾಪುರ : ಕೌಟುಂಬಿಕ ಕಲಹದ ಹಿನ್ನೆಲೆ ಹೆಂಡತಿಯ ಕತ್ತನ್ನು ಸಿಲಿ ಮತ್ತು ತಾನೆ ತನ್ನ ಕತ್ತನ್ನು ಚಾಕುವಿನಿಂದ ಇರಿದು ಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ನೆಹರು ಜಿ ಕಾಲೋನಿಯಲ್ಲಿ ನಡೆದಿದೆ.. ಹೆಂಡತಿ ಸ್ವಪ್ನ ಎಂಬುವವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೇದಲ ವೇಷಣಿ ಗ್ರಾಮದವರಾಗಿದ್ದು ಗಂಡ ಮಂಜುನಾಥ್ ಸಬ್ಬನಹಳ್ಳಿ ಗ್ರಾಮದ ನಿವಾಸಿಯಾಗಿದ್ದು ಇಬ್ಬರಿಗೂ ವಿವಾಹವಾಗಿರುತ್ತದೆ..
ಹೆಂಡತಿ ಸ್ವಪ್ನ (25) ದೊಡ್ಡಬಳ್ಳಾಪುರದಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು.. ಗಂಡ ಮಂಜುನಾಥ್ 35 ಗಾರೆ ಕೆಲಸ ಮಾಡಿಕೊಂಡು ಇಬ್ಬರೂ ಸಹ ಜೀವನ ಸಾಗಿಸುತ್ತಿದ್ದರು. ಹೆಂಡತಿ ಮೇಲೆ ಅಕ್ರಮ ಸಂಬಂಧದ ಅನುಮಾನದಿಂದ ಗಂಡ ಮಂಜುನಾಥ್ ಇಂದು ಬೆಳಗ್ಗೆ ಹೆಂಡತಿಯ ಮೇಲೆ ಜಗಳ ಮತ್ತು ಹಲ್ಲೆ ಮಾಡಿ ಹೆಂಡತಿ ಸ್ವಪ್ನ ಳ ಕತ್ತಿಗೆ ಚಾಕುವಿನಿಂದ ಇರಿದು ಅಲ್ಲೇ ಮಾಡಿರುತ್ತಾನೆ ಮತ್ತು ಗಂಡ ಮಂಜುನಾಥ್ ಆತನೇ ತನ್ನ ಕತ್ತಿಗೆ ಚಾಕುವಿನಿಂದ ಇರಿದು ಕೊಂಡು ನರಲಾಡುತ್ತಿದ್ದ.
ಸಮಯದಲ್ಲಿ ಸ್ಥಳೀಯರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ… ಘಟನೆ ತಿಳಿದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ನಗರ ಠಾಣೆಯ ಅಪರಾಧ ವಲಯದ ಪಿ ಎಸ್ ಐ ಚಂದ್ರಕಲಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..