ಪೊಲೀಸ್ ಕಾನ್​ಸ್ಟೆಬಲ್ ಹುದ್ದೆಗೆ ಅರ್ಜಿ ಹಾಕಿದ ಬಾಲಿವುಡ್ ಬೆಡಗಿ ಸನ್ನಿ ಲಿಯೋನಿ!

ತ್ತರ ಪ್ರದೇಶ ಪೊಲೀಸ್ ಕಾನ್​ಸ್ಟೆಬಲ್ ನೌಕರಿಗೆ ಸನ್ನಿ ಲಿಯೋನಿ ಅರ್ಜಿ ಹಾಕಿದ್ದಾರೆ. ಬಾಲಿವುಡ್ ನಟಿ ಸನ್ನಿ ಲಿಯೋನಿಗೆ ಅವಕಾಶಗಳ ಕೊರತೆಯೇನಿಲ್ಲ. ಬಾಲಿವುಡ್ ಮಾತ್ರವಲ್ಲದೆ ಹಲವು ಭಾಷೆಗಳ ಚಿತ್ರರಂಗದಿಂದ ಅವರಿಗೆ ಅವಕಾಶಗಳು ಬರುತ್ತಲೇ ಇವೆ.

ನಟನೆ ಮಾತ್ರವೇ ಅಲ್ಲದೆ ಐಟಂ ಹಾಡುಗಳು, ಅತಿಥಿ ಪಾತ್ರಗಳಲ್ಲಿಯೂ ಸನ್ನಿ ಲಿಯೋನಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೆಲವು ಜಾಹೀರಾತುಗಳಲ್ಲಿಯೂ ಸಹ ಸನ್ನಿ ನಟಿಸುತ್ತಾರೆ. ಇದೆಲ್ಲದರ ಜೊತೆಗೆ ಹೋಟೆಲ್ ಉದ್ಯಮ, ರಿಯಲ್ ಎಸ್ಟೇಟ್ ಸೇರಿದಂತೆ ಕೆಲವು ಉದ್ಯಮಗಳಲ್ಲಿಯೂ ಸನ್ನಿ ಲಿಯೋನಿ ಬಂಡವಾಳ ತೊಡಗಿಸಿದ್ದು ಉದ್ಯಮಿಯೂ ಆಗಿದ್ದಾರೆ.

ಆದರೆ ಸನ್ನಿ ಲಿಯೋನಿ, ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಕಾನ್​ಸ್ಟೆಬಲ್ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದಾರೆ. ನಿಜ, ಸನ್ನಿ ಲಿಯೋನಿಯ ಅರ್ಜಿ ಸಖತ್ ವೈರಲ್ ಆಗಿದೆ.

ಫೆಬ್ರವರಿ 17ಕ್ಕೆ ಪೊಲೀಸ್ ಕಾನ್​ಸ್ಟೆಬಲ್ ಪರೀಕ್ಷೆ ನಡೆದಿದ್ದು ಬಾಲಿಕಾ ಮಹಾವಿದ್ಯಾನಿಲಯದ ಪರೀಕ್ಷಾ ಕೇಂದ್ರದಲ್ಲಿ ಸನ್ನಿ ಲಿಯೋನಿಯ ಅರ್ಜಿ ಪತ್ತೆಯಾಗಿದೆ.

ಉತ್ತರ ಪ್ರದೇಶ ಮೂಲದ ಮೊಬೈಲ್ ಸಂಖ್ಯೆ ಹಾಗೂ ಮುಂಬೈನ ವಿಳಾಸವನ್ನು ನೀಡಿ ಸನ್ನಿ ಲಿಯೋನಿಯ ಹೆಸರು ಚಿತ್ರಗಳು ಬಳಸಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಸನ್ನಿ ಲಿಯೋನಿ ಹೆಸರಲ್ಲಿ ಅರ್ಜಿ ಸಲ್ಲಿಸಲಾಗಿದೆ ಅಷ್ಟೆ ಯಾರೂ ಸಹ ಆ ಪ್ರವೇಶ ಪತ್ರ ಬಳಸಿ ಪರೀಕ್ಷೆ ಬರೆದಿಲ್ಲ. ನಕಲಿ ಮಾಹಿತಿ ಬಳಸಿ ಅರ್ಜಿ ಸಲ್ಲಿಸಿರುವ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

Loading

Leave a Reply

Your email address will not be published. Required fields are marked *