ಪರ್ಪ್ಯೂಮ್ ರೀಫಿಲ್ಲಿಂಗ್ ಫ್ಯಾಕ್ಟರಿಯಲ್ಲಿ ಅಗ್ನಿ ಅನಾಹುತ: ಮೂವರು ಸಜೀವ ದಹನ

ಬೆಂಗಳೂರು: ಪರ್ಪ್ಯೂಮ್ ರೀಫಿಲ್ಲಿಂಗ್ ಫ್ಯಾಕ್ಟರಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಹೌದು ಪರ್ಫ್ಯೂಮ್ ಫಿಲ್ಲಿಂಗ್ ವೇಳೆ ಬ್ಲಾಸ್ಟ್‌’ಗೊಂಡು ಪರ್ಫ್ಯೂಮ್ ಗೋಡೌನ್‌ಗೆ ಬೆಂಕಿ ತಗುಲಿದ ಪರಿಣಾಮ ಮೂವರು ಸಜೀವ ದಹನವಾಗಿದ್ದು, 5 ಮಂದಿ ಗಾಯಗೊಂಡ ಘಟನೆ ಕುಂಬಳಗೋಡು ಠಾಣಾ ವ್ಯಾಪ್ತಿಯ ರಾಮಸಂದ್ರದಲ್ಲಿ ನಡೆದಿದೆ.

ಕೆಂಗೇರಿಯ ರಾಮಸಂದ್ರದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಿಂದ ಅಕ್ಕಪಕ್ಕದ ಮನೆಗಳಿಗೂ ಹಾನಿ ಉಂಟಾಗಿದ್ದು, ಒಂದು ಬೈಕ್ ಬೆಂಕಿಗಾಹುತಿಯಾಗಿದೆ. ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಜೀವ ದಹನವಾಗಿದ್ದಾರೆ. ಇನ್ನು ಘಟನೆಯಿಂದ 5 ಮಂದಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Loading

Leave a Reply

Your email address will not be published. Required fields are marked *