ವಿಜಯಪುರ: ಚಲಿಸುತ್ತಿದ್ದ ಲಾರಿಯ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಕ್ಷಣಾರ್ಧ ದಲ್ಲಿಯೇ ಇಡೀ ಲಾರಿಗೆ ವ್ಯಾಪಿಸಿದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಜರುಗಿದೆ.
ಘಟನೆಯಿಂದ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. TN 29- CW 8877 ನಂಬರಿನ ಲಾರಿ ಇದಾಗಿದ್ದು, ಲಾರಿಗೆ ಬೆಂಕಿ ವ್ಯಾಪಿಸುತ್ತಲೇ ಕೆಳಗಿಳಿದು ಚಾಲಕ ಹಾಗೂ ಕ್ಲೀನರ್ ಜೀವ ರಕ್ಷಣೆ ಮಾಡಿಕೊಂಡಿದ್ದಾನೆ..
ರಾಜಸ್ತಾನದಿಂದ ಬೆಂಗಳೂರಿಗೆ ಲಾರಿ ತೆರಳುತ್ತಿತ್ಕು ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.ಗ್ರಾನೈಟ್ ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ
ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.