ಬೆಂಗಳೂರಲ್ಲಿ ಶುರುವಾಯ್ತು ನೀರಿನ ಸಮಸ್ಯೆ: ಕುಡಿಯುವ ನೀರಿನ ಘಟಕದಲ್ಲಿ ಸಮಯ ನಿಗದಿ

ಬೆಂಗಳೂರು: ಒಂದು ಕಡೆ ಜಲಮಂಡಳಿ (BWSSB) ನೀರು ಸರಬರಾಜಿನಲ್ಲಿ ವ್ಯತ್ಯಯ ಇನ್ನೊಂದು ಕಡೆ ಕೈ ಕೊಟ್ಟ ಶುದ್ಧ ನೀರಿನ ಘಟಕ..ಈ ಪರಿಣಾಮ ಬೆಂಗಳೂರಿಗೆ (Bengaluru) ಫೆಬ್ರವರಿಯಲ್ಲೇ ನೀರಿನ ಸಮಸ್ಯೆ (Water Problem) ಆರಂಭವಾಗಿದೆ.

ನೀರಿನ ಅಭಾವ ಇರುವುದರಿಂದ ಬಹುತೇಕ ಪ್ರದೇಶದಲ್ಲಿ ನೀರು ಪಡೆಯಲು ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಸಮಯ ನಿಗದಿ ಮಾಡಲಾಗಿದೆಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ಬೋರ್ಡ್ ಗಳ ಅಳವಡಿಸಿ ನೀರಿನ ಅಲಭ್ಯತೆ ಕುರಿತು ಮಾಹಿತಿ ನೀಡಲಾಗಿದೆ.ನೀರಿನ ಅಭಾವ ಇರುವುದರಿಂದ ಪ್ರತಿದಿನ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮುಚ್ಚಲಾಗುತ್ತದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ನೀರಿನ ಲಭ್ಯತೆ ಇದೆ ಎಂಬ ಬೋರ್ಡ್ ಅಳವಡಿಸಲಾಗಿದೆ.

Loading

Leave a Reply

Your email address will not be published. Required fields are marked *