ವ್ಯಾಕ್ಸಿನೇಷನ್‌ ಪಡೆದ ಒಂದೂವರೆ ತಿಂಗಳ ಮಗು ಸಾವು.! ಮಕ್ಕಳ ಪೋಷಕರಿಗೆ ಆತಂಕ

ರಾಮನಗರ: ಆ ಮಗುವಿನ ಆಗಮನದಿಂದ ಇಡೀ ಮನೆಯಲ್ಲಿ ಸಂತೋಷದ ವಾತವರಣ ಇತ್ತು… ಹೊಸ‌ ಅತಿಥಿಗೆ ಇಡೀ ಮನೆ ಸದಸ್ಯರು ಸಂಭ್ರಮ ಸಡಗರದಿಂದ ಹೆಸರಿಟ್ಟು ಕೆಲವೇ ತಾಸುಗಳು ಕಳೆದಿದ್ವು, ಆದರೆ ಲಸಿಕೆ ಹಾಕಿಸಿಕೊಂಡ ಕೆಲವೇ ಹೊತ್ತಿನಲ್ಲಿ ಮಗು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದೆ..‌ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ನಡೆದ ಘಟನೆ ‌ಇಡೀ ಊರಿನ ಪೋಷಕರಿಗೆ ಆತಂಕ ತಂದಿದೆ.‌

ಕಾರಣ ವ್ಯಾಕ್ಸಿನೇಷನ್‌ ಪಡೆದ ಕೆಲವೇ ಹೊತ್ತಿನಲ್ಲಿ ಒಂದು ವರೆ ತಿಂಗಳ ಮಗು ಸಾತ್ವಿಕ್ ಕೊನೆಯುಸಿರೆಳೆದಿದ್ದು, ತಂದೆ ತಾಯಿಗೆ ದಿಕ್ಕೇ ತೋಚದಂತಾಗಿದೆ. ಬೈರಾಪಟ್ಟಣ ಗ್ರಾಮದ ಮೋಹನ್ ಹಾಗು ಸ್ಪೂರ್ತಿ ದಂಪತಿಯ ಮಗು ಸಾತ್ವಿಕ್ ಪೇಂಟಾ ವ್ಯಾಕ್ಸಿನೇಷನ್‌ ಬಳಿಕ ಅಸ್ವಸ್ಥವಾಗಿದ್ದು ಕಲವೇ ಹೊತ್ತಿನಲ್ಲಿ ಅಸುನೀಗಿದೆ.‌ಇದಕ್ಕೆ ಕಾರಣ ವೈದ್ಯರ ನಿರ್ಲಕ್ಷ್ಯ ಅಂತ ಪೋಷಕರು ಆರೋಪ ಮಾಡಿದ್ದಾರೆ..

ಎಲ್ಲಾ ಮಕ್ಕಳಿಗೆ ವ್ಯಾಕ್ಸಿನೇಷನ್‌ ಹಾಕಿಸುವಂತೆ ಇಂದು ಕೂಡ ಸಾತ್ವಿಕ್ ಪೋಷಕರು ದೊಡ್ಡಮಳೂರು ಗ್ರಾಮದ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಪ್ರತಿ ಮಂಗಳವಾದ ಶಿಶು ಹಾಗೂ ಮಕ್ಕಳಿಗೆ ಸರಕಾರದ ವತಿಯಿಂದ ಉಚಿತವಾಗಿ ವ್ಯಾಕ್ಸಿನೇಷನ್‌ ಹಾಕಲಾಗುತ್ತೆ, 18 ಪೈಕಿ ಸಾತ್ವಿಕ್ ಗೂ ಕೂಡ ವೈದ್ಯರು ವ್ಯಾಕ್ಸಿನೇಷನ್‌ ಹಾಕಿದ್ದಾರೆ. ಎಪಿ ಪೇಂಟಾ ವ್ಯಾಕ್ಸಿನೇಷನ್‌ ಪಡೆದ ಸಾತ್ವಿಕ ‌ಕೆಲವೇ ಹೊತ್ತಿನಲ್ಲಿ ನಡುಗಲು ಪ್ರಾರಂಭಿಸಿದ್ದಾನೆ.‌ ಮಗು ಸ್ಥಿತಿ ಕಂಡು ಆಸ್ಪತ್ರೆ ದಾಖಲು ಮಾಡಲು ಪೋಷಕರು ತೆರಳುತ್ತಿದ್ದಂತೆ ದಾರಿ ಮಧ್ಯೆದಲ್ಲಿಯೇ ಮಗು ಸಾತ್ವಿಕ್ ಕೊನೆಯುಸಿರೆಳೆದಿದೆ..

ಇನ್ನು ಈ ಬಗ್ಗೆ ವೈದ್ಯರು ಹೇಳುತ್ತಿರುವುದು ಬೇರೆಯದ್ದೇ‌ ಇದೆ. ವ್ಯಾಕ್ಸಿನೇಷನ್‌ ಯಾವುದೇ ತಪ್ಪು ನಡೆದಿಲ್ಲ,‌ ಉಳಿದ 17 ಮಕ್ಕಳು ಆರೋಗ್ಯವಾಗಿದ್ದಾರೆ. ಮಗು ಸಾವಿಗೆ ಕಾರಣ ಏನು ಅನ್ನೋದನ್ನು ನಿಖರವಾಗಿ ತಿಳಿಯಲು ಮಗು ಗೆ ಪೋಸ್ಟ್ ಮಾರ್ಟಮ್ ಮಾಡಿಸಿ ಅಂತ ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಸಾತ್ವಿಕ್ ಪೋಷಕರು ಮಗುವನ್ನು ಪೋಸ್ಟ್ ಮಾರ್ಟಮ್ ಮಾಡೋದು‌ಬೇಡ ಅಂತ‌ ನಿರ್ಧಾರಕ್ಕೆ ಬಂದು ಮಗಿವಿನ ಅಂತಿಮ ಸಂಸ್ಕಾರ ಮಾಡಿದ್ದಾರೆ.. ಸಧ್ಯ ಈ ಕುರಿತು ಯಾವುದೇ ಪ್ರಕರಣ ದಾಖಲು ಆಗದೇ ಇದ್ದರೂ ವೈದ್ಯರು ಮಕ್ಕಳಿಗೆ ನೀಡಲಾಗಿರುವ ವ್ಯಾಕ್ಸೀನ್ ನ್ನು ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದಾರೆ.

Loading

Leave a Reply

Your email address will not be published. Required fields are marked *