ಸಮರ್ಪಣೆಗೆ ‘ಪ್ರಧಾನಿ ಮೋದಿ’ಯೇ ಉತ್ತಮ ಉದಾಹರಣೆ” ; ಕ್ರಿಕೆಟಿಗ ರವೀಂದ್ರ ಜಡೇಜಾ

ವದೆಹಲಿ : ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ರವೀಂದ್ರ ಜಡೇಜಾ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿಯಾದರು. ಗುಜರಾತ್’ನ ಜಾಮ್ನಗರ್ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿಯಾಗಿರುವ ಜಡೇಜಾ ತಮ್ಮ ಪತ್ನಿ ರಿವಾಬಾ ಅವರೊಂದಿಗೆ ನವದೆಹಲಿಯ ಪ್ರಧಾನಿ ಮೋದಿಯವರ ನಿವಾಸಕ್ಕೆ ಭೇಟಿ ನೀಡಿದರು.

ನಂತ್ರ ಜಡೇಜಾ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್’ನಲ್ಲಿ ಪಿಎಂ ಮೋದಿ ಅವರೊಂದಿಗಿನ ಭೇಟಿಯ ಚಿತ್ರವನ್ನ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಜಡೇಜಾ ಮತ್ತು ಅವರ ಪತ್ನಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೂಗುಚ್ಛ ಮತ್ತು ಸಿಹಿತಿಂಡಿಗಳ ಬಾಕ್ಸ್ ನೀಡುತ್ತಿರುವುದನ್ನ ಕಾಣಬಹುದು.

‘ನರೇಂದ್ರ ಮೋದಿ ಸಾಹೇಬರೇ, ನಿಮ್ಮನ್ನ ಭೇಟಿಯಾಗಿದ್ದು ಬಹಳ ಖುಷಿ ಕೊಟ್ಟಿತು. ನಮ್ಮ ತಾಯ್ನಾಡಿಗೆ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ನೀವು ಒಂದು ಪ್ರಮುಖ ಉದಾಹರಣೆ. ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನೀವು ಎಲ್ಲರಿಗೂ ಸ್ಫೂರ್ತಿ ನೀಡುವುದನ್ನ ಮುಂದುವರಿಸುತ್ತೀರಿ ಎಂದು ನನಗೆ ಖಾತ್ರಿಯಿದೆ’ ಎಂದು ಜಡೇಜಾ ತಮ್ಮ ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

Loading

Leave a Reply

Your email address will not be published. Required fields are marked *