‘ಅಹ್ಲಾನ್ ಮೋದಿ’ ಕಾರ್ಯಕ್ರಮಕ್ಕೆ 65,000ಕ್ಕೂ ಹೆಚ್ಚು ಜನರ ನೋಂದಣಿ

ಬುದಾಬಿ: ಅಬುದಾಬಿಯಲ್ಲಿ ಇಂದು ಆಯೋಜಿಸಲಾಗಿರುವ ಅಹ್ಲಾನ್ ಮೋದಿ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಕಂಡುಬರುತ್ತಿದ್ದು, ಇದುವರೆಗೂ ಸುಮಾರು 65, 000ಕ್ಕೂ ಹೆಚ್ಚು ಜನರ ನೋಂದಣಿಯನ್ನು ಸ್ವೀಕರಿಸಲಾಗಿದೆ.

ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ.

ಏಕೆಂದರೆ ಯಾವುದೇ ಒಂದು ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜಿಸಿಲ್ಲ. ಇಡೀ ಸಮುದಾಯವೇ ಕಾರ್ಯಕ್ರಮ ಆಯೋಜಿಸಿದ್ದು, ಪ್ರಧಾನಿ ಮೋದಿ ಹೆಸರು ಬರುತ್ತಿದ್ದಂತೆಯೇ ಹೆಚ್ಚಿನ ಸಂಖ್ಯೆಯ ಜನರು ಸೇರುವ ಸಾಧ್ಯತೆಯಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಪ್ರೀತಿ ಎಂದು ಅಹ್ಲಾನ್ ಮೋದಿ ಕಾರ್ಯಕ್ರಮದ ಸಂಘಟಕ ಹಾಗೂ ಇಂಡಿಯನ್ ಪೀಪಲ್ ಫೋರಂ ಅಧ್ಯಕ್ಷ ಜಿತೇಂದ್ರ ವೈದ್ಯ ಪ್ರತಿಕ್ರಿಯಿಸಿದ್ದಾರೆ.

ಅಬುದಾಬಿಯಲ್ಲಿರುವ ಭಾರತೀಯ ಸಮುದಾಯ ಸಾಮೂಹಿಕ ಪ್ರಯತ್ನದಿಂದ ಕಾರ್ಯಕ್ರಮ ಆಯೋಜಿಸಿದ್ದು, ನೋಂದಣಿ ಸಂಖ್ಯೆ 65,000 ದಾಟಿದೆ. ಅಬುದಾಬಿಯಲ್ಲಿರುವ ಅನಿವಾಸಿ ಭಾರತೀಯರಿಂದ ಅಭೂತಪೂರ್ವ ಪ್ರತಿಕ್ರಿಯೆ ಕಂಡುಬಂದಿದ್ದು,ದೇಶದ ಜನಸಂಖ್ಯೆಯ ಶೇ.35 ರಷ್ಟು ಭಾರತೀಯರಿದ್ದಾರೆ ಎಂದಿದ್ದಾರೆ.

700 ಸಾಂಸ್ಕೃತಿಕ ಕಲಾವಿದರಿಂದ ಭಾರತೀಯ ಕಲೆ, ವಿವಿಧತೆ ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಇರಲಿದ್ದು, 150 ಕ್ಕೂ ಭಾರತೀಯ ಸಮುದಾಯದ ಗುಂಪುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಪ್ರಧಾನಿ ಮೋದಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಷಣ ಮಾಡಲಿದ್ದು ಬಳಿಕ ಯುಎಇ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

Loading

Leave a Reply

Your email address will not be published. Required fields are marked *