ರೈತರಿಗೆ ಗುಡ್ ನ್ಯೂಸ್: ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ.!

ಮ್ಮ ರಾಜ್ಯದಲ್ಲಿ ಸರಿಯಾದ ಮಳೆ ಬೆಳೆ ಆಗಿಲ್ಲ. ಈ ಬಾರಿ ಅತಿ ಭೀಕರ ಬರಗಾಲಕ್ಕೆ ರಾಜ್ಯ ತುತ್ತಾಗಿದೆ. ಈ ಕಾರಣಕ್ಕೆ ಬಹಳಷ್ಟು ರೈತರಿಗೆ ನಷ್ಟವಾಗಿ ಅದರಿಂದ ಬದುಕಿನಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಅಂಥ ರೈತರಿಗೆ ಬರ ಪರಿಹಾರ ನಿಧಿ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು.

ಆದರೆ ಕೇಂದ್ರದಿಂದ ಸರಿಯಾದ ಸ್ಪಂದನೆ ಸಿಗದ ಕಾರಣ ರಾಜ್ಯ ಸರ್ಕಾರವೇ ಆರಂಭಿಕವಾಗಿ ಬರ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಬೇಕು ಎಂದು ನಿರ್ಧಾರ ಮಾಡಿದೆ. ಮೊದಲ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಿದೆ.

2023-24ಬರಪರಿಹಾರನಿಧಿ:

ಕಳೆದ ವರ್ಷ ಬೆಳೆ ನಾಶ ಅನುಭವಿಸುತ್ತಿರುವ ನೂರಾರು ಗ್ರಾಮಗಳನ್ನು ಬರಪೀಡಿತ ಎಂದು ಆಯ್ಕೆ ಮಾಡಲಾಗಿದ್ದು, ಅಲ್ಲಿನ ರೈತರಿಗೆ ಬರಪರಿಹಾರ ನೀಡುವುದಕ್ಕೆ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ ಕಷ್ಟದಲ್ಲಿರುವ ರೈತರ ಖಾತೆಗೆ ₹2000 ರೂಪಾಯಿ ಬರಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದು, ರೈತರ ಖಾತೆಗೆ ಈ ಹಣ ತಲುಪಿದ್ಯಾ ಎಂದು ಸುಲಭವಾಗಿ ತಿಳಿಯಬಹುದು. ನಿಮ್ಮ ಖಾತೆಗೆ ಹಣ ಬಂದಿದಿಯಾ ಎಂದು ಚೆಕ್ ಮಾಡುವ ಮೂಲಕ ಬರಪರಿಹಾರ ಹಣ ಬಂದಿದ್ಯಾ ಎಂದು ತಿಳಿಯೋಣ..

ನಿಮ್ಮ ಬ್ಯಾಂಕ್‌ ಖಾತೆ ಪರೀಕ್ಷಿಸಿಕೊಳ್ಳಿ, ಬಾರದೇ ಇದ್ದೆ ಹೀಗೆ ಮಾಡಿ:

ರಾಜ್ಯ ಸರ್ಕಾರ ರೈತರಿಗೆ ಬಿಡುಗಡೆ ಮಾಡಿರುವ ಬರ ಪರಿಹಾರ ನಿಧಿಯ ಸ್ಟೇಟಸ್ ಅನ್ನು ಹೇಗೆ ಚೆಕ್ ಮಾಡುವುದು ಎಂದು ಹಂತ ಹಂತವಾಗಿ ತಿಳಿಯೋಣ..

Google Play Store ಇಂದ DBT Karnataka App ಅನ್ನು ನಿಮ್ಮ ಫೋನ್ ಗೆ ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡಿಕೊಳ್ಳಿ.

App ಓಪನ್ ಮಾಡಿ, ಅಲ್ಲಿ Enter Aadhar Number ಎಂದು ಇರುವ ಕಡೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ, Get OTP ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಈಗ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಗೆ OTP ಬರುತ್ತದೆ, ಅದನ್ನು ಎಂಟರ್ ಮಾಡಿ, Verify OTP ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಈಗ ನೀವು ಯೋಜನೆಗಳ ಫಲಾನುಭವಿಯ ಪೂರ್ತಿ ಮಾಹಿತಿಯನ್ನು ನೋಡುತ್ತೀರಿ. ಅಲ್ಲಿ ಫೋನ್ ನಂಬರ್ ಎಂಟ್ರಿ ಮಾಡುವುದಕ್ಕೆ ಆಯ್ಕೆ ಇರುತ್ತದೆ, ಆ ಸ್ಥಳದಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಎಂಟರ್ ಮಾಡಿ. Ok ಆಪ್ಶನ್ ಸೆಲೆಕ್ಟ್ ಮಾಡಿ.

ಈಗ ನೀವು mPIN ಕ್ರಿಯೆಟ್ ಮಾಡಬೇಕು. ನಿಮಗೆ ಸುಲಭ ಅನ್ನಿಸುವ, ಬೇರೆಯವರಿಗೆ ಗೊತ್ತಾಗದೇ ಇರುವ 4 ಅಂಕಿಗಳ ಪಿನ್ ನಂಬರ್ ಅನ್ನು ಈ ಮೂಲಕ ಕ್ರಿಯೇಟ್ ಮಾಡಿ. Submit ಆಪ್ಶನ್ ಮೇಲೆ ಕ್ಲಿಕ್ ಮಾಡಿ.

ನಂತರ Select Beneficiary ಎನ್ನುವ ಆಯ್ಕೆಯನ್ನು ನೋಡುತ್ತೀರಿ, ಇಲ್ಲಿ ನೀವು ಸೇರಿಸಿರುವ ಫಲಾನುಭವಿಯ ಹೆಸರನ್ನು ಸೆಲೆಕ್ಟ್ ಮಾಡಿ.

ಸೆಲೆಕ್ಟ್ ಮಾಡಿದ ನಂತರ, mPIN ಅನ್ನು ಎಂಟರ್ ಮಾಡಿ, ಆಪ್ ಗೆ login ಆಗಿ.

ಇಲ್ಲಿ Payment Status ಎನ್ನುವ ಆಯ್ಕೆಯನ್ನು ಕಾಣುತ್ತೀರಿ. ಅದನ್ನು ಸೆಲೆಕ್ಟ್ ಮಾಡಿ.

ಈಗ ಯಾವೆಲ್ಲಾ ಸರ್ಕಾರಿ ಯೋಜನೆಯ ಫಲ ನಿಮಗೆ ಸಿಗುತ್ತಿದೆ ಎನ್ನುವುದರ ಡೀಟೇಲ್ಸ್ ಕಾಣುತ್ತೀರಿ. ಅಲ್ಲಿ ಇರುವ Input Subsidy for Crop Loss ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಇಲ್ಲಿ ನೀವು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರ ಪರಿಹಾರ ಹಣ ಬಂದಿದ್ಯಾ? ಒಂದು ವೇಳೆ ಬಂದಿದೆ ಎಂದರೆ, ಯಾವ ದಿನ ಯಾವ ಬ್ಯಾಂಕ್ ಖಾತೆಗೆ ಬಂದಿದೆ ಎನ್ನುವುದರ ಪೂರ್ತಿ ಮಾಹಿತಿ ನೋಡುತ್ತೀರಿ.

ಈ ಹಿಂದೆಕೇಂದ್ರ ಸರ್ಕಾರ ಶ್ರೀಮಂತರಿಗೆ ಕೊಡುವ 1 ಲಕ್ಷದ 75 ಸಾವಿರ ಕೋಟಿ ರೂಪಾಯಿ ತೆರಿಗೆ ವಿನಾಯಿತಿ ಬಿಟ್ಟಿ ಭಾಗ್ಯ ಅಲ್ವಾ? ಬಡವರಿಗೆ ಕೊಟ್ಟರೆ ಮಾತ್ರ ಬಿಟ್ಟಿ ಭಾಗ್ಯಾನಾ? ಶ್ರೀಮಂತರು ವರ್ಷಕ್ಕೆ 5 ಲಕ್ಷ ಕೋಟಿ ಸಾಲ ಮನ್ನಾ ಅಗುತ್ತಲ್ಲ ಅದು ಬಿಟ್ಟಿ ಭಾಗ್ಯ ಅಲ್ವಾ? ಬದುಕೋದಕ್ಕೆ ಬಡವರಿಗೆ ಸಹಾಯ ಮಾಡೋ ಶಕ್ತಿ ತುಂಬೋದು ಬಿಟ್ಟಿ ಭಾಗ್ಯಾನಾ? ಎಂದು ಪ್ರಶ್ನಿಸಿದ ಕೃಷ್ಣ ಬೈರೇಗೌಡ, ಬಡವರಿಗೆ ಸಹಾಯ ಮಾಡಿದರೆ ಅವರಿಗೆ ಸಹಿಸಲು ಆಗಲ್ಲ ಎಂದರು.

Loading

Leave a Reply

Your email address will not be published. Required fields are marked *