ಅಯೋಧ್ಯೆ ರಾಮ ಮಂದಿರಕ್ಕೆ ದುಬಾರಿ ಚಿನ್ನದ ಆಭರಣ ನೀಡಿದ ಅಮಿತಾಭ್ ಬಚ್ಚನ್

ಯೋಧ್ಯೆಯಲ್ಲಿ ಉದ್ಘಾಟನೆಯಾಗಿರುವ ಬಾಲ ರಾಮಮಂದಿರಕ್ಕೆ ಬಾಲಿವುಡ್ ನಟ ಇತ್ತೀಚೆಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಅಮಿತಾಬ್ ರಾಮನಿಗೆ ದುಬಾರಿ ಚಿನ್ನದ ಹಾರವನ್ನು ಅರ್ಪಿಸಿದ್ದಾರೆ.

ಇತ್ತೀಚೆಗೆ ಅಮಿತಾಬ್ ಜ್ಯುವೆಲರಿ ಶಾಪ್ ಉದ್ಘಾಟನೆಗಾಗಿ ಅಯೋಧ್ಯೆಗೆ ತೆರಳಿದ್ದಾರೆ.

ಜ್ಯೂವೆಲ್ಲರಿ ಉದ್ಘಾಟನೆಯ ಬಳಿಕ ಅಮಿತಾಬ್ ಬಾಲ ರಾಮನಿಗೆ ಸರವನ್ನು ನೀಡಿದ್ದಾರೆ. ದೇವಸ್ಥಾನಕ್ಕೆ ಬರುವಾಗ ಸಾಕಷ್ಟು ಭದ್ರತೆಗಳೊಂದಿಗೆ ಆಗಮಿಸಿದ ಅಮಿತಾಭ್ ಕುರ್ತಾ-ಪೈಜಾಮ ಧರಿಸಿ ಗಮನ ಸೆಳೆದಿದ್ದಾರೆ. ಕೇಸರಿ ಬಣ್ಣದ ಶಾಲನ್ನು ಕುತ್ತಿಗೆಗೆ ಹಾಕಿಕೊಂಡಿದ್ದರು.

ಗುರುವಾರ ಮಧ್ಯಾಹ್ನದ ವೇಳೆಗೆ ರಾಮ ಮಂದಿರಕ್ಕೆ ಭೇಟಿ ನೀಡಿದರು ಅಮಿತಾಭ್. ಸುಮಾರು ಅರ್ಧಗಂಟೆ ಅವರು ಅಲ್ಲಿಯೇ ಇದ್ದರು. ಆ ಬಳಿಕ ಅಯೋಧ್ಯೆಯ ಅಧಿಕಾರಗಳ ಜೊತೆ ಮಧ್ಯಾಹ್ನದ ಭೋಜನ ಸವಿದಿದ್ದಾರೆ.

Loading

Leave a Reply

Your email address will not be published. Required fields are marked *