ಬಿಗ್‍ಬಾಸ್ ಸ್ಪರ್ಧಿ ತನಿಷಾಗೆ ಬಿಗ್ ರಿಲೀಫ್

ಬೆಂಗಳೂರು: ಬಿಗ್‍ಬಾಸ್ (Bigg Boss) ಸ್ಪರ್ಧಿ ತನಿಷಾಗೆ (Tanisha Kuppanda) ಬಿಗ್ ರಿಲೀಫ್ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ಮೇಲೆ ಅಟ್ರಾಸಿಟಿ ದೂರು (Atrocity Case) ದಾಖಲಾಗಿತ್ತು. ಇದೀಗ ಅಟ್ರಾಸಿಟಿ ಕೇಸ್‍ನಲ್ಲಿ ತನಿಷಾಗೆ ಕ್ಲೀನ್‍ಚಿಟ್ ಕೊಡಲಾಗಿದೆ.

ಬೆಂಕಿ ತನಿಷಾ ಈಗ ಬಿಸೋ ದೊಣ್ಣೆಯಿಂದ ಪಾರಾಗಿದ್ದಾರೆ ಎನ್ನುತ್ತಿದೆ ಪೊಲೀಸ್ ಮೂಲಗಳು

ತನಿಷಾ ಕುಪ್ಪಂಡ ಬಿಗ್ ಬಾಸ್ ಶೋನಲ್ಲಿ ಭೋವಿ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದ ಮೇಲೆ ತನಿಷಾ ವಿರುದ್ಧ ಭೋವಿ ಸಮಾಜದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪದ್ಮ ಕುಂಬಳುಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಕುಂಬಳಗೋಡು ಪೊಲೀಸರು ಜಾತಿನಿಂದನೆ ಆರೋಪದಡಿ ತನಿಷಾ ಕುಪ್ಪಂಡ ವಿರುದ್ಧ ಎಫ್‍ಐಆರ್ ದಾಖಲಾಸಿದ್ದರು.

ಈ ಪ್ರಕರಣದಲ್ಲಿ ತನಿಷಾ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಒತ್ತಡ ಹೇರಲಾಗಿತ್ತು. ಈ ಕುರಿತಂತೆ ತನಿಷಾ ತಾನು ಆ ರೀತಿ ಮಾತನಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆದರೂ, ಕ್ರಮಕ್ಕೆ ಒತ್ತಾಯ ಮಾಡಲಾಗಿತ್ತು. ಸದ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

Loading

Leave a Reply

Your email address will not be published. Required fields are marked *