ವಿಶ್ವಕಪ್‌ನಲ್ಲಿ ಭಾರತಕ್ಕೆ ಆಸೀಸ್‌ ಎದುರಾಳಿ : ಫೆ.11ರಂದು ಫೈನಲ್‌

ಕ್ಯಾನ್ಬೆರಾ: 2023ರ ಏಕದಿನ ವಿಶ್ವಕಪ್‌ ಫೈನಲ್‌(World Cup 2023) ರೋಚಕ ಹಣಾ-ಹಣಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಮಣಿಸಿ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ಅಂಡರ್‌-19 ವಿಶ್ವಕಪ್‌ (Under-19 World Cup )ಟೂರ್ನಿಯಲ್ಲೂ ಮತ್ತೆ ಭಾರತಕ್ಕೆ ಆಸೀಸ್‌ ಎದುರಾಳಿಯಾಗಿದ್ದು, ವಿಶ್ವಕಪ್‌ ಕ್ಷಣಗಳನ್ನು ನೆನಪಿಸುವಂತೆ ಮಾಡಿದೆ.

ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia Under 19s) ತಂಡ ಒಂದು ವಿಕೆಟ್‌ಗಳಿಂದ ಪಾಕ್ ತಂಡವನ್ನು ಸೋಲಿಸಿ, ಫೈನಲ್‌ ಪ್ರವೇಶಿಸಿದೆ. ಭಾನುವಾರ (ಫೆ.11)‌ ಮಧ್ಯಾಹ್ನ 1:30ರ ವೇಳೆಗೆ ಆಸ್ಟ್ರೇಲಿಯಾ ಸಹಾರಾ ಪಾರ್ಕ್ ವಿಲೋಮೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್‌ ಪಂದ್ಯ ನಡೆಯಲಿದ್ದು, ಭಾರತ – ಆಸೀಸ್‌ ಯುವಕರ ತಂಡ ಸೆಣಸಲಿವೆ.

ಆಸೀಸ್‌ ವಿರುದ್ಧ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಪಾಕಿಸ್ತಾನ ತಂಡ 48.5 ಓವರ್‌ಗಳಲ್ಲಿ ಕೇವಲ 179 ರನ್‌ಗಳಿಗೆ ಸರ್ವಪತನ ಕಂಡಿತು. 180 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 49.1 ಓವರ್‌ಗಳಲ್ಲಿ 9 ವಿಕೆಟ್‌ನಷ್ಟಕ್ಕೆ 181 ರನ್‌ ಗಳಿಸಿ ರೋಚಕ ಜಯ ಸಾಧಿಸಿತು. ಪಾಕಿಸ್ತಾನ ಪರ ಅಜಾನ್ ಅವೈಸ್ 91 ಎಸೆತಗಳಲ್ಲಿ 52 ರನ್‌, ಅರಾಫತ್ ಮಿನ್ಹಾಸ್ 61 ಎಸೆತಗಳಲ್ಲಿ 51 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ವಿಫಲರಾದ ಕಾರಣ ಪಾಕ್‌ ಅಲ್ಪಮೊತ್ತಕ್ಕೆ ಔಟಾಗಿ ಸೋಲನುಭವಿಸಿತು

Loading

Leave a Reply

Your email address will not be published. Required fields are marked *