ದೊಡ್ಡಬಳ್ಳಾಪುರ : ಕರ್ನಾಟಕದ ಅತಿ ಹೆಚ್ಚು ಆದಾಯವಿರುವ ಮೊದಲ 10 ಮುಜರಾಯಿ ದೇವಸ್ಥಾನಗಳ ಪಟ್ಟಿಯಲ್ಲಿ ದೊಡ್ಡಬಳ್ಳಾಪುರದ ಘಾಟಿ ಕ್ಷೇತ್ರಕ್ಕೂ ಸ್ಥಾನವಿದೆ, ಪ್ರತಿ ತಿಂಗಳಿಗೊಮ್ಮೆ ಕ್ಷೇತ್ರದಲ್ಲಿ ಭಕ್ತರ ಹುಂಡಿ ಹಣ ಎಣಿಕೆ ಕಾರ್ಯವನ್ನ ಮಾಡಲಾಗಿತ್ತು. ಒಟ್ಟು 55,24,663 ರೂಪಾಯಿ ಸಂಗ್ರಹವಾಗಿದೆ.
ಕಳೆದ ಜನವರಿ 16 ರಂದ್ದು ಘಾಟಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ ಕಾರ್ಯಕ್ರಮ ನೆರೆವೆರಿದ್ದು, ಜಾತ್ರೆ ಅಂಗವಾಗಿ ಸಾವಿರಾರು ಭಕ್ತರು ಕ್ಷೇತ್ರದ ಬಂದ ಹಿನ್ನಲೆ ಭಕ್ತರ ಹುಂಡಿ ಹಣದಲ್ಲಿ ಏರಿಕೆಯಾಗಿದೆ. ಇಂದು ದೇವಸ್ಥಾನದ ಅವರಣದಲ್ಲಿ ಹುಂಡಿ ಹಣ ಎಣಿಕೆ ಕಾರ್ಯವನ್ನ ಮಾಡಲಾಗಿದ್ದು. ಈ ವೇಳೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜು, ಮುಜರಾಯಿ ಇಲಾಖೆ ತಹಶೀಲ್ದಾರ್ ಜೆ.ಜೆ.ಹೇಮಾವತಿ, ಪ್ರಧಾನ ಆರ್ಚಕರಾದ ನಾಗೇಂದ್ರಶರ್ಮಾ, ಕೆನರಾ ಬ್ಯಾಂಕ್ ಸಿಬ್ಬಂದಿ,
ದೇವಸ್ಥಾನದ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಭಕ್ತರ ಸಮ್ಮುಖದಲ್ಲಿ ಎಣಿಕೆ ಕಾರ್ಯ ಮಾಡಲಾಗಿತು. ಒಟ್ಟು ಸಂಗ್ರಹವಾದ 55,24,663 ರೂಪಾಯಿಯಲ್ಲಿ ಅತಿ ಹೆಚ್ಚಿನ ಹಣ ನೂರು ರೂಪಾಯಿ ನೋಟ್ ಗಳ ಮೂಲಕ 21,57,600 ರೂಪಾಯಿ ಸಂಗ್ರಹವಾಗಿದೆ, ನ್ಯಾಣಗಳಿಂದ 106566 ರೂಪಾಯಿ ಸಂಗ್ರಹವಾಗಿದೆ.ಇದರ ಜೊತೆಗೆ 1 ಕೆಜಿ 390 ಗ್ರಾಂ ಬೆಳ್ಳಿ, 4 ಗ್ರಾ 600 ಮಿ.ಗ್ರಾ ಚಿನ್ನ ಸಂಗ್ರಹವಾಗಿದೆ.