ವಿಶಾಖಪಟ್ಟಣಂ: ಇಂಗ್ಲೆಂಡ್ (England) ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ (Team India) 106 ರನ್ಗಳಿಂದ ಭರ್ಜರಿ ಗೆದ್ದುಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (World Test Championship) ಅಂಕ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಗೆಲ್ಲಲು 399 ರನ್ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್ 69.2 ಓವರ್ಗಳಲ್ಲಿ 292 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ 5 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಮೂರನೇ ದಿನ 1 ವಿಕೆಟ್ ನಷ್ಟಕ್ಕೆ 67 ರನ್ಗಳಿಸಿದ್ದ ಇಂಗ್ಲೆಂಡ್ ಉಳಿದ 9 ವಿಕೆಟ್ಗಳಿಂದ 188 ರನ್ಗಳಿಸಿ ಸರ್ವಪತನಗೊಂಡಿತು. ಆರಭಿಕ ಆಟಗಾರ ಝಾಕ್ ಕ್ರಾಲಿ 73 ರನ್ (132 ಎಸೆತ, 8 ಬೌಂಡರಿ, 1 ಸಿಕ್ಸರ್) ಹೊಡೆದರೆ ಕೊನೆಯಲ್ಲಿ ಬೆನ್ ಫೋಕ್ಸ್ 36 ರನ್, ಟಾಮ್ ಹಾರ್ಟ್ಲಿ 36 ರನ್ ಹೊಡೆಯುವ ಮೂಲಕ ಸ್ವಲ್ಪ ಪ್ರತಿರೋಧ ತೋರಿದರು.
ಎರಡನೇ ಸ್ಥಾನಕ್ಕೆ ಜಿಗಿತ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅಂಕ ಪಟ್ಟಿಯಲ್ಲಿ ಭಾರತ ಈಗ ಎರಡನೇ ಸ್ಥಾನಕ್ಕೆ ಜಿಗಿದೆ. 6 ಪಂದ್ಯಗಳಿಂದ ಭಾರತ 38 ಅಂಕ ಕಲೆ ಹಾಕಿದ್ದರೆ ಆಸ್ಟ್ರೇಲಿಯಾ 10 ಪಂದ್ಯಗಳಿಂದ 66 ಅಂಕ ಕಲೆ ಹಾಕಿ ಮೊದಲ ಸ್ಥಾನ ಪಡೆದಿದೆ.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 396/10
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 253/10
ಭಾರತ ಎರಡನೇ ಇನ್ನಿಂಗ್ಸ್ 255/10
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 292/10