28 ಕ್ಷೇತ್ರದಲ್ಲೂ ಗೆಲ್ಲಲು ನಮ್ಮ ಸಂಘಟನೆ ಮುಂದಾಗಿದೆ: ಬಿವೈ ರಾಘವೇಂದ್ರ

ಶಿವಮೊಗ್ಗ: ದೇಶ ವಿಭಜನೆ ಮಾಡುವುದು ಕಾಂಗ್ರೆಸ್‌ನ (Congress) ಸಂಸ್ಕೃತಿ. ಈಗಾಗಲೇ ದೇಶವನ್ನು ಮೂರು ವಿಭಾಗ ಮಾಡಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ (BY Raghavendra) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಡಿಕೆ ಸುರೇಶ್ (DK Suresh) ರಾಷ್ಟ್ರ ವಿಭಜನೆ ಹೇಳಿಕೆ ವಿಚಾರವಾಗಿ ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ಒಡೆಯುವ ವಿಚಾರದಲ್ಲಿ ರಾಜಕೀಯ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಸಹ ಈ ಹೇಳಿಕೆಯನ್ನು ವಿರೋಧ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಲ್ಲಿಯೇ ಭಿನ್ನ ನಿಲುವು ಇದೆ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.

28 ಕ್ಷೇತ್ರದಲ್ಲೂ ಗೆಲ್ಲಲು ನಮ್ಮ ಸಂಘಟನೆ ಮುಂದಾಗಿದೆ. ಲೋಕಸಭಾ ಯುದ್ಧಕ್ಕೆ ಬೂತ್ ಮಟ್ಟದಿಂದ ಕಾರ್ಯಕರ್ತರು ಅಣಿಯಾಗುತ್ತಿದ್ದಾರೆ. ದೇಶದಲ್ಲಿ 400 ಕ್ಷೇತ್ರ ಗೆಲ್ಲುವ ನಿರೀಕ್ಷೆ ಇದೆ. ದೇಶದಲ್ಲಿ ಬಿಜೆಪಿ (BJP) ಪರ ವಾತಾವರಣ ಇದೆ. ಶಿವಮೊಗ್ಗ ಕ್ಷೇತ್ರದಲ್ಲಿ ಅಭಿವೃದ್ಧಿ ನೋಡಿ ನನ್ನನ್ನು ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Loading

Leave a Reply

Your email address will not be published. Required fields are marked *