ಮಲೇಷ್ಯಾದ ಜೊಹೊರ್ ರಾಜ್ಯದ ಸುಲ್ತಾನ್ ಇಬ್ರಾಹಿಂನನ್ನು ಹೊಸ ರಾಜನಾಗಿ ಆಯ್ಕೆ

ಕೌಲಾಲಂಪುರ್:  ಮಲೇಷಿಯಾದ ಜೋಹರ್ ಪ್ರದೇಶವನ್ನು ಅಳುತ್ತಿದ್ದ ರಾಜ ಸುಲ್ತಾನ್ ಇಬ್ರಾಹಿಂ ಸುಲ್ತಾನ್ ಇಸ್ಕಂದರ್ ಅವರನ್ನು ಅದ್ದೂರಿ ಸಮಾರಂಭದಲ್ಲಿ ಮಲೇಷಿಯಾದ ನೂತನ ರಾಜನನ್ನಾಗಿ ನೇಮಿಸಲಾಗಿದೆ. ಮಲೇಷಿಯಾದಲ್ಲಿ ರಾಜಕೀಯ ಸ್ಥಿರತೆಯನ್ನು ಖಾತ್ರಿಡಿಸುವಲ್ಲಿ ಈ ಕೋಟ್ಯಾಧಿಪತಿ ರಾಜ ಪ್ರಮುಖ ಪಾತ್ರ ವಹಿಸಬಹುದು ಎಂದು ಊಹಿಸಲಾಗಿದೆ. ಒಬ್ಬರಾದ ಮೇಲೊಬ್ಬರಂತೆ ತಿರುಗುವ ವಿಶಿಷ್ಠವಾದ ರಾಜಪ್ರಭುತ್ವದ ವ್ಯವಸ್ಥೆಯ ಅಡಿಯಲ್ಲಿ ಬುಧವಾರ ರಾಷ್ಟ್ರದ ಹೊಸ ರಾಜನಾಗಿ ಸುಲ್ತಾನ್ ಇಬ್ರಾಹಿಂ ಪ್ರಮಾಣವಚನ ಸ್ವೀಕರಿಸಿದರು.

65 ವರ್ಷದ ಸುಲ್ತಾನ್ ಇಬ್ರಾಹಿಂ ಇಸ್ಕಂದರ್ ಅವರು ಅರಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸಂದರ್ಭದಲ್ಲಿ ಇತರ ರಾಜಮನೆತನಗಳು, ಪ್ರಧಾನಿ ಅನ್ವರ್ ಇಬ್ರಾಹಿಂ ಮತ್ತು ಕ್ಯಾಬಿನೆಟ್ ಸದಸ್ಯರು ಈ ಸಮಾರಂಭದಲ್ಲಿ ಹಾಜರಿದ್ದು, ಅಧಿಕಾರದ ಘೋಷಣೆಯ ದಾಖಲೆಗೆ ಸಹಿ ಹಾಕಿದರು.ಇದಾದ ಬಳಿಕ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ.

ಮಲೇಷ್ಯಾ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಸುಲ್ತಾನ್ ಇಬ್ರಾಹಿಂ ಅವರು ರಿಯಲ್ ಎಸ್ಟೇಟ್‌ನಿಂದ ದೂರಸಂಪರ್ಕ ಮತ್ತು ವಿದ್ಯುತ್ ಸ್ಥಾವರಗಳವರೆಗೆ ವ್ಯಾಪಕವಾದ ವ್ಯಾಪಾರ ಸಾಮ್ರಾಜ್ಯದ ಮಾಲೀಕತ್ವವನ್ನು ಹೊಂದಿದ್ದಾರೆ. ಮಲೇಷ್ಯಾದಲ್ಲಿ ಆಡಳಿತದಲ್ಲಿರುವ ಸರ್ಕಾರದಿಂದ ಪ್ರಧಾನಿಯಾಗಿರುವ ಅನ್ವರ್ ಇಬ್ರಾಹಿಂ ಜೊತೆ ಈ ಹೊಸ ರಾಜ ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. ಹೀಗಾಗಿ ಇವರ ಆಡಳಿತವೂ ಅನ್ವರ್ ಅವರ ಸರ್ಕಾರವನ್ನು ಬಲಪಡಿಸಬಹುದು ಎಂದು ನಂಬಲಾಗಿದೆ. ಅನ್ವರ್ ನೇತೃತ್ವದ ಮಲೇಷಿಯಾ ಸರ್ಕಾರವೂ ಬಲವದ ಇಸ್ಲಾಮಿಕ್‌ ವಿರೋಧವನ್ನು ಎದುರಿಸುತ್ತಿದೆ.

Loading

Leave a Reply

Your email address will not be published. Required fields are marked *