ನವದೆಹಲಿ: ಕಳೆದ 10 ವರ್ಷಗಳಲ್ಲಿ ನೇರ ತೆರಿಗೆ ಪ್ರಮಾಣದಲ್ಲಿ ಶೇ.3 ರಷ್ಟು ಹೆಚ್ಚಳವಾಗಿದೆ. 2024-25ರ ಆರ್ಥಿಕ ವರ್ಷಕ್ಕೆ ತೆರಿಗೆ ಸಂಗ್ರಹ 26.02 ಟ್ರಿಲಿಯನ್ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ. ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.2024-25ನೇ ಸಾಲಿನ ಮಧ್ಯಂತರ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ನೇರ ಮತ್ತು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಸರ್ಕಾರ ಮುಂದಾಗಿದೆ.
ಮಧ್ಯಂತರ ಬಜೆಟ್ನಲ್ಲಿ (Interim Budget) ಆದಾಯ ತೆರಿಗೆ ಸ್ಲ್ಯಾಬ್ಗಳು ಕಳೆದ ಹಣಕಾಸು ವರ್ಷದ್ದೇ ಆಗಿರುವುದರಿಂದ ತೆರಿಗೆದಾರರಿಗೆ ಯಾವುದೇ ಪರಿಹಾರ ಅಥವಾ ಆತಂಕ ಇಲ್ಲ. ಆದರೆ ಪರಿಹಾರ ನಿರೀಕ್ಷೆ ಮಾಡಿದ್ದವರಿಗೆ ಬೇಸರ ತಂದಿದೆ. ಹಾಲಿ ಸ್ಲ್ಯಾಬ್ ಪ್ರಕಾರ 7 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.
2023-24ರ ಬಜೆಟ್ನಲ್ಲಿ (Union Budget 2023) ವಾರ್ಷಿಕ 7 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಏರಿಕೆ ಮಾಡುವ ಮೂಲಕ ಸಂಬಳದಾರರಿಗೆ ಸೀತಾರಾಮನ್ ಸಿಹಿ ಸುದ್ದಿ ನೀಡಿದ್ದರು. ಈ ಮೊದಲು ವಾರ್ಷಿಕ 5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಸಿಕ್ಕಿತ್ತು.
ಹಾಲಿಎಷ್ಟುಆದಾಯಕ್ಕೆಎಷ್ಟುತೆರಿಗೆಯಿದೆ?
0-3 ಲಕ್ಷ ರೂ. – ಇಲ್ಲ
3- 6 ಲಕ್ಷ ರೂ. – 5%
6- 9 ಲಕ್ಷ ರೂ. – 10%
9-12 ಲಕ್ಷ ರೂ. – 15%
12-15 ಲಕ್ಷ ರೂ. 20%