ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದ ಕೋರ್ಟ್

ಲಕ್ನೋ: ಕಳೆದ ಕೆಲವು ಸಮಯದಿಂದ ಚರ್ಚೆಯಲ್ಲಿರುವ ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಪರ ಅರ್ಜಿದಾರರಿಗೆ ಮೊದಲ ಗೆಲುವು ಸಿಕ್ಕಿದೆ. ವಾರಾಣಸಿಯ ನ್ಯಾಯಾಲಯವು ಬುಧವಾರದಂದು ಹಿಂದೂ ಧರ್ಮದವರಿಗೆ ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅನುಮತಿ ನೀಡಿದೆ.

ಮಸೀದಿಯ ಕೆಳಗಿರುವ 10 ಮೊಹರು ನೆಲಮಾಳಿಗೆಗಳಲ್ಲಿ ಹಿಂದೂ ಪೂಜೆಗಳು ಇನ್ನು 7 ದಿನಗಳಲ್ಲಿ ಪ್ರಾರಂಭವಾಗಲಿವೆ. ಇದಕ್ಕೆ ಬೇಕಾದ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಹಿಂದೂ ಕಡೆಯವರು ‘ವ್ಯಾಸ್ ಕಾ ತೆಖಾನಾ’ದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ್ದಾರೆ. ಏಳು ದಿನಗಳಲ್ಲಿ ಪೂಜೆ ಪ್ರಾರಂಭವಾಗಲಿದೆ. ಎಲ್ಲರಿಗೂ ಪೂಜೆ ಮಾಡುವ ಹಕ್ಕಿದೆ. ಜಿಲ್ಲಾಡಳಿತ 7 ದಿನಗಳಲ್ಲಿ ವ್ಯವಸ್ಥೆ ಮಾಡಬೇಕಿದೆ” ಎಂದು ಹಿಂದೂ ಪರ ಅರ್ಜಿದಾರರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಪುರಾತತ್ವ ಇಲಾಖೆ ಮಸೀದಿಯಲ್ಲಿ ಸರ್ವೆ ನಡೆಸಿತ್ತು. ಅದರ ವರದಿಯು ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು. ಮಂದಿರವನ್ನು ಕೆಡವಿ ಮಸೀದಿ ಕಟ್ಟಲಾಗಿಲ್ಲ, ಮಂದಿರದ ಮೇಲ್ಗಡೆ ಮಸೀದಿ ರಚನೆ ಮಾಡಲಾಗಿದೆ ಎಂದು ಸರ್ವೆ ವರದಿ ತಿಳಿಸಿತ್ತು.

Loading

Leave a Reply

Your email address will not be published. Required fields are marked *