ಅಡುಗೆಗೆ ಅಷ್ಟೇ ಅಲ್ಲದೇ ಮುಖದ ಅಂದವನ್ನು ಹೆಚ್ಚಿಸುತ್ತೆ ಅರಿಶಿನ ಪುಡಿ!

ರಿಶಿನದ ಪ್ರಯೋಜನಗಳು ಪ್ರತಿಯೊಬ್ಬರಿಗೂ ತಿಳಿದಿವೆ. ಆದ್ದರಿಂದಲೇ ಇದನ್ನು ಅನಾದಿ ಕಾಲದಿಂದಲೂ ಬಳಸಲಾಗುತ್ತದೆ. ವಿಶೇಷವಾಗಿ ಭಾರತೀಯರು ಬಹುತೇಕ ಎಲ್ಲಾ ಅಡುಗೆಗೆಗಳಿಗೂ ಅರಿಶಿನವನ್ನು ಸೇರಿಸುತ್ತಾರೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಮುಖಕ್ಕೆ ಪ್ಯಾಕ್‌ ಆಗಿ ಅರಿಶಿನವನ್ನು ಬಳಸುವುದರಿಂದ ಅರಿಶಿನವು ನಮ್ಮ ದೈನಂದಿನ ಜೀವನಶೈಲಿಯಲ್ಲಿ ವಿಶೇಷ ಸ್ಥಾನ ಹೊಂದಿದೆ.

ಅರಿಶಿನವು ಅದ್ಭುತವಾದ ಮಸಾಲೆ. ಆದರೆ ನೀವು ಅದನ್ನು ಯಾವುದರೊಂದಿಗೆ ಬೆರೆಸುತ್ತಿದ್ದೀರಿ ಎಂಬುದರ ಬಗ್ಗೆ ತಿಳಿದಿರಬೇಕು. ಅರಿಶಿನವನ್ನು ಮತ್ತೊಂದು ಪದಾರ್ಥದೊಂದಿಗೆ ಬೆರೆಸುವುದು ಕೆಟ್ಟ ಅಭ್ಯಾಸ. ಅಂತರ್ಜಾಲವನ್ನು ತಡಕಾಡಿದರೆ ಅದರಲ್ಲಿ ರೋಸ್ ವಾಟರ್, ನಿಂಬೆ ರಸ, ಹಾಲು ಇತ್ಯಾದಿಗಳೊಂದಿಗೆ ಅರಿಶಿನವನ್ನು ಬೆರೆಸಿದ ಫೇಸ್ ಪ್ಯಾಕ್ ಅನ್ನು ತೋರಿಸಲಾಗುತ್ತದೆ.

* ಅರಶಿನದ ಕೋಡನ್ನು ಸುಟ್ಟು ಪುಡಿ ಮಾಡಿಕೊಂಡು, ಉಪ್ಪು ಬೆರೆಸಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆಯು ಕಡಿಮೆಯಾಗುತ್ತದೆ.

* ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅಪ್ಪಟವಾದ ಅರಶಿನ ಪುಡಿ ಮತ್ತು ಕಾಳು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ ಕುಡಿಯುವುದರಿಂದ ನೆಗಡಿ ಮತ್ತು ಗಂಟಲು ನೋವಿಗೆ ಪರಿಣಾಮಕಾರಿಯಾಗಿದೆ.

* ಮಹಿಳೆಯರು ಸ್ನಾನ ಮಾಡುವಾಗ ಕೆನ್ನೆಗೆ ಅರಶಿನದ ಪುಡಿಯನ್ನು ಹಚ್ಚಿ ಕೊಂಡು ಸ್ನಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡರೆ ಮುಖದಲ್ಲಿ ಬೇಡದ ಕೂದಲು ಬೆಳೆಯುವುದಿಲ್ಲ ಹಾಗೂ ಮುಖವು ಕಾಂತಿಯುತವಾಗಿರುತ್ತದೆ.

* ಅರಶಿನದ ಪುಡಿಯನ್ನು ಹರಳೆಣ್ಣೆಯೊಂದಿಗೆ ಮಿಶ್ರಮಾಡಿ ಶರೀರಕ್ಕೆ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದರೆ ಚರ್ಮದ ಕಾಂತಿ ಹೆಚ್ಚಾಗಿ, ಚರ್ಮರೋಗ ನಿವಾರಣೆಯಾಗುತ್ತದೆ.

* ಅರಶಿನದ ಪುಡಿಯನ್ನು ಮೊಸರಿನಲ್ಲಿ ಕದಡಿ ಬೆಳಗಿನ ಹೊತ್ತಿನಲ್ಲಿ ಒಂದು ವಾರಗಳ ಕಾಲ ಸೇವಿಸಿದರೆ ಕಾಮಾಲೆ ರೋಗವು ಕಡಿಮೆಯಾಗುತ್ತದೆ.

* ಅರಶಿನ, ಮರದನ, ಮಂಜಿಷವನ್ನು ಹಾಲು, ತುಪ್ಪ ಬೆರೆಸಿ ಅರೆದು ಮೊಡವೆಗಳಿಗೆ ಹಚ್ಚಿಕೊಂಡರೆ ಮೊಡವೆಗಳು ಮಾಯಾವಾಗುತ್ತದೆ.

* ಅರಿಶಿನದ ಕೋಡನ್ನು ನಿಂಬೆರಸದಲ್ಲಿ ತೇಯ್ದು ದಿನಕ್ಕೆ ನಾಲ್ಕರಿಂದ ಐದು ಬಾರಿ ಕಾಲಿನಲ್ಲಿರುವ ಆಣಿಗೆ ಲೇಪಿಸಿದರೆ ಉದುರಿ ಹೋಗುತ್ತದೆ.

* ಅರಶಿನವನ್ನು ಅಡುಗೆಯಲ್ಲಿ ಬಳಸುವುದರಿಂದ ಆಹಾರವು ಬೇಗನೇ ಜೀರ್ಣವಾಗುತ್ತದೆ.

* ಒಣ ಅರಶಿನದ ಕೋಡನ್ನು ಪುಡಿ ಮಾಡಿ ಕೆಂಡದ ಮೇಲೆ ಹಾಕಿ ಅದರ ಹೊಗೆಯನ್ನು ತೆಗೆದುಕೊಳ್ಳುವುದರಿಂದ ನೆಗಡಿ ಯು ಗುಣಮುಖವಾಗುತ್ತದೆ.

Loading

Leave a Reply

Your email address will not be published. Required fields are marked *