ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಬೆದರಿಕೆ ಹಾಕಿದ್ದ ಯುವಕ ಅರೆಸ್ಟ್!

ಬೆಂಗಳೂರು:- ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಬೆದರಿಕೆ ಹಾಕಿದ್ದ ಯುವಕನನ್ನು ಅರೆಸ್ಟ್ ಮಾಡಲಾಗಿದೆ.

ಕಳೆದ ಭಾನುವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೊಚ್ಚಿ ಗೆ ಹೊರಟಿದ್ದ ಯುವಕ ತನ್ನ ಬ್ಯಾಗ್‌ಚೆಕ್‌ ಮಾಡೋ ವೇಳೆ ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ.

ಈ ವೇಳೆ ಬ್ಯಾಗ್‌ನಲ್ಲಿ ಬಾಂಬ್ ಇದೆ ಅಂದಿದ್ದಾನೆ. ಇದೇನಪ್ಪಾ ಅಂತಾ ಪೊಲೀಸರು ಈತನ ಇಡೀ ಲಗೇಜ್ ಜಾಲಾಡಿದ್ದಾರೆ.

ಬಾಂಬ್‌ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆಸಾಮಿಯನ್ನ ಬಂಧಿಸಿ, ಅಪರಾಧ ಹಿನ್ನೆಲೆ ಏನಾದ್ರೂ ಇದೆಯಾ ಅನ್ನೋದನ್ನ ಪ್ರಶ್ನೆ ಮಾಡಿದ್ದಾರೆ.

Loading

Leave a Reply

Your email address will not be published. Required fields are marked *