ಬೆಂಗಳೂರು: ರಾಷ್ಟ್ರಧ್ವಜ ಹಾರಿಸಿದ್ದರೆ ಯಾವುದೇ ಅಭ್ಯಂತರ, ತಕರಾರು ಇರುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಅವರು ರಾಷ್ಟ್ರಧ್ವಜ ಹಾರಿಸಿದ್ದರೆ ಯಾವುದೇ ಅಭ್ಯಂತರ, ತಕರಾರು ಇರುತ್ತಿರಲಿಲ್ಲ ಎಂದು ಹೇಳಿದರು.
ಅವರು ರಾಷ್ಟ್ರಧ್ವಜ ಇಲ್ಲವೇ ಕರ್ನಾಟಕದ ಧ್ವಜ ಹಾರಿಸುತ್ತೇವೆಂದು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದ್ದಾರೆ ಆದರೆ ಹನುಮ ಧ್ವಜವನ್ನು ಹಾರಿಸಿ ತಮ್ಮ ಅಜೆಂಡಾವನ್ನು ಪ್ರಚುರಪಡಿಸಿದ್ದಾರೆ.
ಸರಕಾರೀ ಸ್ಥಳಗಳಲ್ಲಿ ಹಾಗೆಲ್ಲ ಮಾಡಲಾಗದು, ಮುಂದೆ ಅವರು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧಾರ್ಮಿಕ ಬಾವುಟ ಹಾರಿಸಲು ಮುಂದಾಗಬಹುದು ಎಂದು ಸಿದ್ದರಾಮಯ್ಯ ಹೇಳಿದರು. ಯಾವ ಬಾವುಟ ಹಾರಿಸಲು ಪರ್ಮಿಷನ್ ತೆಗೆದುಕೊಂಡಿದ್ದರೋ ಅದನ್ನು ಹಾರಿಸದ ಕಾರಣ ಮಂಡ್ಯ ಜಿಲ್ಲಾಡಳಿತ ಕ್ರಮ ಜರುಗಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.