ಕೌಲಾಲಂಪುರ: ಸಮುದ್ರದದಲ್ಲಿ ಹಡುಗಗಳಲ್ಲಿ ಜನರು ಜೀವನ ಮಾಡುವುದು ನಿಮಗೆ ಗೊತ್ತೆ ಇದೆ. ಆದರೆ ಮಲೇಷಿಯಾದಲ್ಲಿರುವ ಒಂದು ಬುಡಕಟ್ಟು ಜನಾಂಗದ ಸದಸ್ಯರು ವರ್ಷಪೂರ್ತಿ ಸಮುದ್ರದಲ್ಲಿ ಮೇಲೆ ಮನೆ ಮಾಡುತ್ತಿದ್ದಾರೆ.
ಹೌದು, ಮಲೇಷ್ಯಾದ ಬಜೌ ಬುಡಕಟ್ಟು ಸಮುದಾಯದ ಸದಸ್ಯರು ಸಮುದ್ರದ ಮೇಲೆ ಸಣ್ಣ ಮನೆಯನ್ನು ನಿರ್ಮಿಸಿ ತಮ್ಮ ಜೀವನವನ್ನು ಕಳೆಯುತ್ತಾರೆ.
ಸಣ್ಣ ಸಮುದಾಯವಾಗಿರುವ ಇವರು ಭೂಮಿಮೇಲೆ ನೆಲೆಸುವುದಿಲ್ಲ. ಬರೀ ನೀರಿನ ಮೇಲೆ ಬುದುಕುವುದು ಇವರ ವಿಶೇಷತೆ. ಸಮುದ್ರದ ಅಂಚಿನಲ್ಲಿ ನೀರಿನೊಳಗೆ ಮನೆಕಟ್ಟಿ ಜೀವನ ನಡೆಸುವ ಸಂಪ್ರದಾಯ ಅನಾದಿಕಾಲದಿಂದ ಬಂದಿದೆ.
ನಾಗರಿಕತೆಗಳು ಬೆಳೆದಿದ್ದರೂ ಇನ್ನೂ ಯಾಕೆ ಇಲ್ಲೆ ಇದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ, ನಮ್ಮ ಹಿರಿಯರು ಈ ವ್ಯವಸ್ಥೆಯಲ್ಲಿ ನೆಲೆಸಿದ್ದರು. ನಾವು ಈ ರೀತಿಯ ಮನೆಯಲ್ಲಿ ನೆಲೆಸಿ ಹಿರಿಯರ ಸಂಪ್ರದಾಯವನ್ನು ಮುಂದುವರೆಸುತ್ತಿದ್ದೇವೆ ಎಂದು ಉತ್ತರಿಸುತ್ತಾರೆ.
ಮೀನು ಹಿಡಿಯುವ ಇವರು ಮೂಲತಃ ಫಿಲಿಪೈನ್ಸ್ ಮೂಲದವರಾಗಿದ್ದು, ಇನ್ನು ಮಲೇಷ್ಯಾ ಸರ್ಕಾರ ಇವರಿಗೆ ಪೌರತ್ವ ನೀಡಿಲ್ಲ.