ದಾವಣಗೆರೆ: ಆಸ್ತಿ ವಿಚಾರಕ್ಕಾಗಿ ಇಬ್ಬರು ಸಹೋದರರ ನಡುವೆ ಜಗಳ ಉಂಟಾಗಿತ್ತು. ದಾರಿಯ ಮಧ್ಯೆಯೆ ಉಂಟಾದಂತ ಬಡಿದಾಟದಲ್ಲಿ ಸಹೋದರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದನು. ಅಲ್ಲಿಗೆ ತೆರಳಿದಂತ ತಮ್ಮ ಅಣ್ಣನನ್ನು ಚಾಕುವಿನಿಂದ ಇರಿದು, ಹತ್ಯೆಗೈದಿರುವ ಘಟನೆ ಹರಿಹರ ತಾಲೂಕಿನಲ್ಲಿ ನಡೆದಿದೆ.
ಆಸ್ತಿ ವಿಚಾರಕ್ಕಾಗಿ ಅಣ್ಣ ಕುಮಾರ್ ಹಾಗೂ ತಮ್ಮ ನಾಗರಾಜ್ ನಡುವೆ ಜಗಳ ಉಂಟಾಗಿತ್ತು. ಮೊದಲು ಜಗಳೂರಿನಲ್ಲೇ ಬೈಕ್ ನಲ್ಲಿ ತೆರಳುತ್ತಿದ್ದಾಗ ನಾಗರಾಜ್ ಹಲ್ಲೆ ಮಾಡಿದ್ದರಿಂದ ಕುಮಾರ್ ಗಂಭೀರವಾಗಿ ಗಾಯಗೊಂಡು ಹರಿಹರ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದನು.
ಅಲ್ಲಿಗೆ ಬಿಡದಂತ ನಾಗರಾಜ್, ಹರಿಹರ ತಾಲೂಕು ಆಸ್ಪತ್ರೆಗೆ ತೆರಳಿ, ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅಣ್ಣ ಕುಮಾರ್ (34) ಅನ್ನು ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದಾನೆ.
ಅಣ್ಣ-ತಮ್ಮಂದಿರ ನಡುವೆ ಜಗಳ ತಂದೆಯ ನಿಧನದ ಬಳಿಕ ಶುರುವಾಗಿತ್ತು. ಹರಿಹರದಲ್ಲಿನ ಮನೆ ಪಾಲು ಕೇಳಿದ್ದರಿಂದ ತೀವ್ರಗೊಂಡು ಇಂದು ಬಡಿದಾಟದಿಂದ ಆರಂಭಗೊಂಡು, ಕೊನೆಗೆ ಅಣ್ಣನ ಕೊಲೆಯಲ್ಲಿ ಅಂತ್ಯಗೊಂಡಿದೆ. ಈ ಸಂಬಂಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.