ಬೆಂಗಳೂರು : ಬೆಂಗಳೂರಿನಲ್ಲಿ ಹ್ಯಾಕರ್ ಶ್ರೀಕಿ ಬಂಧನದ ಬಳಿಕ ಮತ್ತೊಬ್ಬ ದೊಡ್ಡ ಸೈಬರ್ ವಂಚಕ ದಿಲೀಪ್ ರಾಜೇಗೌಡನನ್ನು ಸಿಐಡಿ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಇ ಫೈಲಿಂಗ್ ಪೂರ್ಟಲ್ ನ ನ್ಯೂನ್ಯತೆ ದುರ್ಬಳಕೆ ಮಾಡಿಕೊಂಡು ಕೋಟ್ಯಾಂತರ ರೂ.
ವಂಚಿಸಿದ್ದ ಅತಿದೊಡ್ಡ ಸೈಬರ್ ವಂಚಕ ದಿಲೀಪ್ ರಾಜೇಗೌಡನನ್ನು ಸಿಐಡಿ ಎಸ್. ಪಿ ಎಂ.ಡಿ. ಶರತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಇ ಫೈಲಿಂಗ್ ಪೂರ್ಟಲ್ ನ ನ್ಯೂನ್ಯತೆ ದುರ್ಬಳಕೆ ಮಾಡಿಕೊಂಡು ಅಸಲಿ ಅರ್ಜಿದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಕೋಟ್ಯಂತರ ರೂ. ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ದಿಲೀಪ್ ರಾಜೇಗೌಡನನ್ನು ಸಿಐಡಿ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.