ಯುವತಿಗೆ ಕೈ ಕೊಟ್ಟ ಪೊಲೀಸ್ ಪೇದೆ..! ಠಾಣೆಯ ಮುಂದೆ ಯುವತಿಯ ಧರಣಿ

ಬೆಂಗಳೂರು : ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ದುರ್ಬಳಕೆ  ಮಾಡಿಕೊಂಡಿದ್ದಾನೆಂದು ಆರೋಪಿಸಿ ಯುವತಿಯೊಬ್ಬಳು ಪೊಲೀಸ್‌ ಠಾಣೆಯ ಎದುರಿನಲ್ಲೇ ಧರಣಿ ಕುಳಿತಿರುವ ಘಟನೆ ಬುಧವಾರ ಬಸವನಗುಡಿ ಪೊಲೀಸ್‌ ಠಾಣೆಯೆದುರು ನಡೆದಿದೆ. ಯುವತಿಯನ್ನು ನೋಡುತ್ತಿದ್ದಂತೆಯೇ ಆರೋಪಿತ ಪೊಲೀಸ್‌ ಅನಿಲ್‌ ಕುಮಾರ್‌ ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದ್ದಾನೆ.

ಚಿತ್ರದುರ್ಗ ಮೂಲದ ನಾಗವೇಣಿ ಎಂಬ ಯುವತಿ ತನಗೆ ನ್ಯಾಯ ಕೊಡಿಸುವಂತೆ ಪೊಲೀಸ್‌ ಠಾಣೆಯೆದುರೇ ಒಂಟಿ ಪ್ರತಿಭಟನೆ ನಡೆಸುತ್ತಿದ್ದಾರೆ.ನಾವಿಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಮದುವೆಯಾಗುವುದಾಗಿ ನನ್ನನ್ನು ನಂಬಿಸಿ ಹಲವು ಬಾರಿ ಪೊಲೀಸ್‌ ಕ್ವಾರ್ಟಸ್‌ ಗೆ ಕರೆದೊಯ್ದು ನನ್ನೊಡನೆ ಬಲವಂತದಿಂದ ಸಂಭೋಗ ನಡೆಸಿದ್ದಾನೆ. ಆದರೆ ಈಗ ಮತ್ತೊಬ್ಬರೊಡನೆ ಮದುವೆ ನಿಶ್ಚಯಿಸಿಕೊಂಡು ತನಗೆ ಮೋಸವೆಸುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

Loading

Leave a Reply

Your email address will not be published. Required fields are marked *