ಟೆಕ್ಸಾಸ್: ಗರ್ಭಿಣಿ ಮಹಿಳೆಯೋರ್ವಳನ್ನೂ ಅಪಹರಿಸಿ ಆಕೆಯನ್ನೂ ಒತ್ತೆಯಾಳಾಗಿ ಇಟ್ಟುಕೊಂಡು ಅತ್ಯಾಚಾರ ಮಾಡಿದ ವ್ಯಕ್ತಿಯೊಬ್ಬನನ್ನು ಅರೆಸ್ಟ್ ಮಾಡಲಾಗಿದೆ. ಹೌದು ಐದು ವರ್ಷಗಳ ಹಿಂದೆ ಮಹಿಳೆಯನ್ನು ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಕ್ಕಾಗಿ ಟೆಕ್ಸಾಸ್‌ನ ವ್ಯಕ್ತಿ ಲೀ ಕಾರ್ಟರ್ (Lee Carter) ಎಂಬಾತನನ್ನು ಬಂಧಿಸಲಾಗಿದೆ.
52 ವರ್ಷದ ಮಹಿಳೆ ಗರ್ಭಿಣಿಯಾಗಿದ್ದಾಗ ಕಾರ್ಟರ್ ಬೀದಿಯಿಂದ ಆಕೆಯನ್ನು ಅಪಹರಿಸಿದ್ದು,
ಆತನ ವಿರುದ್ಧ ಅಪಹರಣ (kidnapping) ಆರೋಪ ಹೊರಿಸಲಾಗಿದೆ. ಹೂಸ್ಟನ್‌ನಲ್ಲಿರುವ (Houston) ಕಾರ್ಟರ್‌ನ ಮನೆಗೆ ಹತ್ತಿರದಲ್ಲಿದ್ದ ಗ್ಯಾರೇಜ್‌ನಲ್ಲಿ ಮಹಿಳೆಯನ್ನು ಲಾಕ್ ಮಾಡಲಾಗಿದೆ ಎಂದು ಪೊಲೀಸರು ಪತ್ತೆ ಮಾಡಿದರು. ಎಪ್ರಿಲ್ 7, 2023 ರಂದು ಬಹಿರಂಗಪಡಿಸಿದ ದಾಖಲೆಗಳ ಪ್ರಕಾರ ಹೂಸ್ಟನ್‌ನ 5251 ಪೆರ್ರಿ ಸ್ಟ್ರೀಟ್‌ಗೆ ಹೋಗುತ್ತಿರುವಾಗ ಹೂಸ್ಟನ್ ಪೊಲೀಸರು ಗ್ಯಾರೇಜ್‌ನಿಂದ ಧ್ವನಿ ಕೇಳಿದರು ಎಂದು ಹೇಳಲಾಗಿದೆ.
ಅಧಿಕಾರಿಗಳು ಗ್ಯಾರೇಜ್‌ನ ಕಿಟಕಿಯನ್ನು ಒಡೆದಿರುವುದನ್ನು ವಿಡಿಯೊ ತೋರಿಸುತ್ತದೆ. ಅವರು ಒಳಗೆ ನಾಯಿ ಮತ್ತು ಹಾಸಿಗೆಯನ್ನು ಕಂಡುಕೊಂಡರು, ಅಲ್ಲಿ ಮಹಿಳೆಯನ್ನು ಸೆರೆಯಲ್ಲಿ ಇರಿಸಲಾಗಿತ್ತು. ಸಂತ್ರಸ್ತೆ ಸುಮಾರು 30 ವರ್ಷ ವಯಸ್ಸಿನವಳಾಗಿದ್ದು, ಆಕೆಯನ್ನು ರಕ್ಷಿಸಿದಾಗ ಆಕೆ ಕೇವಲ 70 ಪೌಂಡ್‌ಗಳಷ್ಟು ತೂಕವಿದ್ದರು.ಅವಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಎರಡು ತಿಂಗಳಿನಿಂದ ಸ್ನಾನ ಮಾಡಲಿಲ್ಲ ಎಂದು ಹೇಳಿದ್ದಾರೆ.
ಸಂತ್ರಸ್ತೆಯ ಪ್ರಕಾರ ಆಕೆ ನಾಲ್ಕೈದು ವರ್ಷಗಳ ಹಿಂದೆ ವೈಪರ್ ಎಂಬ ಸ್ಟೇಜ್ ನೇಮ್ ಇರುವ ರಾಪರ್ ಕಾರ್ಟರ್ ಅವರನ್ನು ಭೇಟಿಯಾದರು. ಆ ಸಮಯದಲ್ಲಿ, ಆಕೆ ಗರ್ಭಿಣಿಯಾಗಿದ್ದು ಅಲ್ಮೆಡಾ ಜಿನೋವಾದಲ್ಲಿ ಭಿಕ್ಷೆ ಬೇಡುತ್ತಿದ್ದಳು. ಕಾರ್ಟರ್ ಆರಂಭದಲ್ಲಿ ಅವಳಿಗೆ ಒಂದು ಡಾಲರ್ ನೀಡಿ ಹೋಗಿದ್ದ. ನಂತರ ಹಿಂತಿರುಗಿ ಬಂದ ಆತ ಸಹಾಯ ಬೇಕಾದರೆ ತನ್ನ ಕಾರು ಏರುವಂತೆ ಹೇಳಿದ್ದ.
ಮುಂದಿನ ಹಲವು ವರ್ಷಗಳವರೆಗೆ, ಕಾರ್ಟರ್ ಅವಳನ್ನು ತನ್ನ ಗ್ಯಾರೇಜ್‌ನಲ್ಲಿ ಬಂಧಿಯಾಗಿರಿಸಿದನು. ನನಗೆ ಮಾದಕ ದ್ರವ್ಯ ಕೊಟ್ಟು ಆತನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಏರ್ಪಡುವಂತೆ ಒತ್ತಾಯಿಸಿದ್ದನು. “ಪ್ರತಿವಾದಿ [ಕಾರ್ಟರ್] ಕ್ರ್ಯಾಕ್ ಕೊಕೇನ್ ಮತ್ತು ಇತರ ಕಾನೂನುಬಾಹಿರ ಮಾದಕವಸ್ತುಗಳ ಜೊತೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾನೆ,
ಇದರಿಂದಾಗಿ ಆಕೆ ಅಲ್ಲಿಂದ ಹೋಗಲು ನಿಶಕ್ತಿಹೊಂದಿದ್ದಳು ಎಂದು ನ್ಯಾಯಾಲಯದ ದಾಖಲೆಗಳು ಹೇಳಿವೆ ಎಂದು ಡೈಲಿ ಮೇಲ್ ವರದಿ ಮಾಡಿವೆ. ಸಂತ್ರಸ್ತೆ ಹೇಗೋ ಮಾಡಿ ಕಾರ್ಟರ್‌ನ ಲ್ಯಾಪ್‌ಟಾಪ್ ಬಳಸಿದ್ದು ಪೊಲೀಸರನ್ನು ಸಂಪರ್ಕಿಸಲು ಟೆಕ್ಸ್ಟ್ ನೌ ಅಪ್ಲಿಕೇಶನ್ ಅನ್ನು ಬಳಸಿದರು. ತಾನು ಹಿಂದೆ ಕಿಟಕಿಯನ್ನು ಒಡೆದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದನ್ನು ಅವಳು ವಿವರಿಸಿದಳು. ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಕಾರ್ಟರ್ ಅವಳನ್ನು ಅಲ್ಲಿಂದ ಕರೆದುಕೊಂಡು ಮನೆಗೆ ತಂದಿದ್ದ ಎನ್ನಲಾಗಿದೆ.