ಬಾಬ್ರಿ ಮಸೀದಿಯನ್ನು ವ್ಯವಸ್ಥಿತವಾಗಿ ಮುಸ್ಲಿಮರಿಂದ ಕಿತ್ತುಕೊಳ್ಳಲಾಗಿದೆ: ಓವೈಸಿ

ಲಬುರಗಿ: ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಎಲ್ಲಾ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲಿ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮಂದಿರದ ಜಾಗದಲ್ಲಿ 500 ವರ್ಷಗಳ ಕಾಲ ಮುಸ್ಲಿಮರು ನಮಾಜ್ ಮಾಡಿದ್ದಾರೆ ಎನ್ನುವ ಮೂಲಕ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ.

ಕಲಬುರಗಿಯಲ್ಲಿ (Kalaburagi) ಮಾತನಾಡಿದ ಅವರು, ಕಾಂಗ್ರೆಸ್‍ನ ಜಿ.ಬಿ ಪಂತ್ ಮುಖ್ಯಮಂತ್ರಿ ಆಗಿದ್ದಾಗ ರಾಜ್ ಕೆ ಅಂಧೇರಿಯಲ್ಲಿ ರಾಮನ ಮೂರ್ತಿ ಇಡಲಾಗಿತ್ತು. ಅವರು ಅಲ್ಲಿಂದ ಮೂರ್ತಿಯನ್ನು ತೆಗೆಯಲಿಲ್ಲ. ಆಗ ಅಲ್ಲಿನ ಕಲೆಕ್ಟರ್ ನಾಯರ್ ಸಾಬ್ ಮಸೀದಿ ಬಂದ್ ಮಾಡಿ ಪೂಜಾ ಶುರು ಮಾಡಿದ್ದರು. ಅಲ್ಲದೇ ಅಲ್ಲಿ ನಮ್ಮ ಮಸೀದಿ ಇತ್ತು, ಇರಲಿದೆ ಕೂಡ ಎಂದು ಹೇಳಿದ್ದಾರೆ.

1992 ರಲ್ಲಿ ಬಿಜೆಪಿ ಸಂಘ ಪರಿವಾರ ಸುಪ್ರೀಂಕೋರ್ಟ್ ಮುಂದೆ ಪ್ರಮಾಣ ಮಾಡಿ ಬಾಬ್ರಿ ಮಸೀದಿ ಕೆಡವಿದರು. 1989 ರಲ್ಲಿ ಪಾಲನ್‍ಪುರದಲ್ಲಿ ಬಿಜೆಪಿ ರೆಸ್ಯೂಲೇಷನ್ ಪಾಸ್ ಮಾಡಿತ್ತು. ವಿಶ್ವ ಹಿಂದೂ ಪರಿಷತ್ ಹುಟ್ಟಿಕೊಂಡಾಗ ರಾಮಮಂದಿರ ಇರಲಿಲ್ಲ. ಮಹಾತ್ಮಾ ಗಾಂಧಿಯವರು ಈ ವಿಚಾರದಲ್ಲಿ ಏನಾದರೂ ಹೇಳಿದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.

Loading

Leave a Reply

Your email address will not be published. Required fields are marked *