ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಹವಾಮಾನ ಹಾಗು ಮಣ್ಣಿನ ಗುಣ ಒಂದೇ ಆಗಿರುವುದರಿಂದ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಲು ಕಾರಣವಾಗಿದೆ..
ಮಾನ್ಯ ಶರದ್ ಪವಾರ್ ರವರು ನಾಲ್ಕು ಬಾರಿ ಮಹಾರಾಷ್ಟ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು, ಕೇಂದ್ರದಲ್ಲಿ ರಕ್ಷಣಾ ಮಂತ್ರಿ ಮತ್ತು ಕೃಷಿ ಮಂತ್ರಿಯಂತಹ ಹುದ್ದೆಗಳನ್ನು ನಿರ್ವಹಣೆ ಮಾಡಿದ ಮಹಾನೀಯರು.
ಅಲ್ಲದೇ ಅತೀದೊಡ್ಡ ಕ್ರೀಡಾ ಸಂಸ್ಥೆ ಬಿ.ಸಿ.ಸಿ.ಐ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಸದ್ದು ಮಾಡಿದವರು…
ಮಹಾರಾಷ್ಟ್ರದ ಬಾರಮತಿಯ ಕೃಷಿ ವಿಜ್ಞಾನ ಕೇಂದ್ರಲ್ಲಿ ಆಯೋಜಿಸಿದ್ದ 2024 ಮೆಗಾ ಕೃಷಿ ಎಕ್ಸ್ಪೋ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಯವರು,
ಶರದ್ ಪವಾರ್ ರವರು ಕೇಂದ್ರ ಕೃಷಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಲಾಖೆ ಹಾಗೂ ರೈತಪರ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ ಮಹಾತ್ಮರು. ಇವರು ಕೇಂದ್ರದ ಕೃಷಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇಶಾದ್ಯಂತ 700 ಕ್ಕೂ ಹೆಚ್ಚು ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಿ ಅದರ ಅಭಿವೃದ್ಧಿಗೆ ಕಾರಣರಾದವರು..
ಇವರ ಅವಧಿಯಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ಕೃಷಿ ಉತ್ಪಾದನೆಯಲ್ಲಿ ಸಾಧನೆ ಮಾಡಿದ ಗೌರವ ಮಾನ್ಯ ಶರದ್ ಪವಾರ್ ರವರಿಗೆ ಸಲ್ಲುತ್ತದೆ.
30 ವರ್ಷಗಳ ಹಿಂದೆ ಬಾರಾಮತಿಯು ಬರುಡು ಭೂಮಿಯಿಂದ ಕೂಡಿದ್ದು, ಬರ ಪೀಡಿತ ಪ್ರದೇಶವಾಗಿತ್ತು. ಬಾರಾಮತಿ ಇಂದು ಮಾನ್ಯ ಶರದ್ ಪವಾರ್ ರವರ ಶ್ರಮದಿಂದ ಹಾಗೂ ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದ ಸಂಶೋಧನೆ ಹಾಗೂ ಸಹಕಾರದಿಂದ ಬಾರಾಮತಿ ಕೃಷಿ ರಂಗದಲ್ಲಿ ಅತ್ಯುನ್ನತವಾದ ಅಭಿವೃದ್ಧಿಯನ್ನು ಕಂಡಿದೆ. ಇದಕ್ಕೆ ಸಾಕ್ಷಿಯೆಬಂತೆ ಅಂತರರಾಷ್ಟಿಯ ಅಂಗೂರು ಸಮ್ಮೇಳನ ಬಾರಾಮತಿಯಲ್ಲಿ ಆಯೋಜನೆಗೊಂಡಿದ್ದು..
1992ರಲ್ಲಿ ಬಾರಾಮತಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬಯೋಟೆಕ್ ಅಂಡ್ ಅಬಯೋಟಿಕ್ ಸೈನ್ಸ್ ಮ್ಯಾನೇಜ್ಮೆಂಟ್ ಸಂಸ್ಥೆ ಪ್ರಾರಂಭವಾಗಿದ್ದು ಬಾರಾಮತಿಯ ಹೆಗ್ಗಳಿಕೆ. ಅಲ್ಲದೇ ಕರ್ನಾಟಕದ ಬೆಳಗಾವಿ ಜಿಲ್ಲೆಯ ಮತ್ತಿಕೊಪ್ಪದಲ್ಲಿ ಐ.ಸಿ.ಎ.ಆರ್- ಕೆ.ವಿ.ಕೆ ಪ್ರಾರಂಭಗೊಳ್ಳಲು ಮಾನ್ಯ ಶರದ್ ಪವಾರ್ ರವರ ಶ್ರಮವಿದೆ.. ಹಾಗೂ ಈ ಕಟ್ಟಡದ ಉದ್ಘಾಟನೆಯೂ ಸಹ ಮಾನ್ಯ ಶರದ್ ಪವಾರ್ ರಿಂದಲೇ ಆಗಿದ್ದಕ್ಕೆ ಕರ್ನಾಟಕ ಸರ್ಕಾರವು ಹೃದಯ ಪೂರ್ವಕ ಅಭಿನಂದನೆಯನ್ನು ಸಲ್ಲಿಸಲಿದೆ..
30 ವರ್ಷಗಳ ಹಿಂದೆ ಬಾರಾಮತಿಯಲ್ಲಿ ಪ್ರಾರಂಭವಾದ ಕೃಷಿ ವಿಜ್ಞಾನ ಕೇಂದ್ರ ಇಂದು ಕೃಷಿ ಅಭಿವೃಧ್ಧಿಗೆ ಸಾಕಷ್ಟು ಕೊಡುಗೆ ನೀಡಿದಲ್ಲದೇ ಅನೇಕ ವೈಜ್ಞಾನಿಕ ಸಂಶೋಧನೆಗೂ ಇಡೀ ದೇಶದಲ್ಲೇ ಬಾರಾಮತಿ ಕೃಷಿ ವಿಜ್ಞಾನ ಕೇಂದ್ರ ಹೆಸರುವಾಸಿಯಾಗಿದೆ. ಈ ಸಂಸ್ಥೆ ದೇಶವ್ಯಾಪಿ ಪ್ರಸಿದ್ಧಿಯಾಗಲೂ ಕಾರಣಕರ್ತರಾದ ಮಾನ್ಯ ಶರದ್ ಪವಾರ್ ರವರು ಹಾಗೂ ಸಂಸ್ಥೆಯ ಅಧ್ಯಕ್ಷ ಶ್ರೀ ರಾಜೇಂದ್ರ ಪವಾರ್ಗೂ ಮತ್ತಷ್ಟು ಅಭಿವೃಧ್ಧಿ ಕಾರ್ಯಗಳನ್ನು ಕೈಗೊಳ್ಳಲು ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು…