ಡೀಪ್‍ಫೇಕ್ ಸುಳಿಯಲ್ಲಿ ಕ್ರಿಕೆಟಿಕ ಸಚಿನ್‌ ತೆಂಡೂಲ್ಕರ್:‌ ಪೊಲೀಸ್‌ ಠಾಣೆಗೆ ದೂರು!

ಮುಂಬೈ: ಇತ್ತೀಚೆಗೆ ವೈರಲ್ ಆಗಿದ್ದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಡೀಪ್‍ಫೇಕ್ (Deepfake) ವೀಡಿಯೋ ಸಂಬಂಧ ಮುಂಬೈ (Mumbai) ಪೊಲೀಸರು (Police) ಗೇಮಿಂಗ್ ಅಪ್ಲಿಕೇಶನ್ ಹಾಗೂ ಫೇಸ್‍ಬುಕ್ ಪುಟವೊಂದರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಮತ್ತು ಅವರ ಮಗಳು ಸಾರಾ ಆನ್‍ಲೈನ್ ಗೇಮ್‍ವೊಂದರ ಮೂಲಕ ದೊಡ್ಡ ಮೊತ್ತದ ಹಣವನ್ನು ಗೆದ್ದಿದ್ದಾರೆ ಎಂದು ವೀಡಿಯೋದಲ್ಲಿ ಹೇಳಲಾಗಿತ್ತು. ಅಲ್ಲದೇ ಸಚಿನ್ ಗೇಮಿಂಗ್ ಅಪ್ಲಿಕೇಷನ್‍ನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರ ಧ್ವನಿ ಹಾಗೂ ಅವರ ವೀಡಿಯೋ ಬಳಸಿ ಹಂಚಿಕೊಳ್ಳಲಾಗಿತ್ತು. ಇದನ್ನು ಸಚಿನ್ ಅವರ ಟ್ವಿಟ್ಟರ್ ಮೂಲಕವೂ ಫ್ಲಾಗ್ ಮಾಡಲಾಗಿತ್ತು

ಈ ಬಗ್ಗೆ ಸಚಿನ್ ಆಪ್ತ ಸಹಾಯಕರೊಬ್ಬರು ನೀಡಿದ ದೂರಿನ ಅಡಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 500ರ ಅಡಿ (ಮಾನನಷ್ಟ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66ರ (ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುವುದು) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಗೇಮಿಂಗ್ ಸೈಟ್ ಮತ್ತು ಫೇಸ್‍ಬುಕ್ ಪುಟದ ಮಾಲೀಕರ ಬಗ್ಗೆ ಪೊಲೀಸರು ವಿವರಗಳನ್ನು ಹಂಚಿಕೊಂಡಿಲ್ಲ.

Loading

Leave a Reply

Your email address will not be published. Required fields are marked *